ಭಾನುವಳ್ಳಿ : 9ನೇ ದಿನಕ್ಕೆ ಕಾಲಿಟ್ಟ ಧರಣಿ

ಭಾನುವಳ್ಳಿ : 9ನೇ ದಿನಕ್ಕೆ ಕಾಲಿಟ್ಟ ಧರಣಿ

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಬೆಂಬಲ

ಮಲೇಬೆನ್ನೂರು, ಜ.17- ಭಾನುವಳ್ಳಿ ಗ್ರಾಮದ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲೇ ಅನಧಿಕೃತವಾಗಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ತೆರವುಗೊ ಳಿಸುವಂತೆ ಆಗ್ರಹಿಸಿ, ನಾಯಕ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹವು ಬುಧವಾರ 9ನೇ ದಿನಕ್ಕೆ ಕಾಲಿಟ್ಟಿತು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ಮತ್ತು ಬಂಧುತ್ವ ಫೌಂಡೇಷನ್ ಸಂಸ್ಥಾಪಕ ರಾಘು ದೊಡ್ಮನಿ ಈ ದಿನದ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ, ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸಿ ಕೊಳ್ಳೋಣ ಎಂದರು.

ಮಂಗಳವಾರ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಅವರು, ಧರಣಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿ, ಜಿಲ್ಲಾಡಳಿತ ತತ್‌ಕ್ಷಣ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ಒತ್ತಾಯಿಸಿದರು.

ಹರಿಹರ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ್, ಮಕರಿ ಪಾಲಾಕ್ಷಪ್ಪ, ಶ್ರೀಮತಿ ಪಾರ್ವತಿ ಬೋರಯ್ಯ, ಆಟೋ ರಾಜು, ಹಂಚಿನ ದೇವೇಂದ್ರಪ್ಪ, ಗ್ರಾಮದ ಟಿ.ಪುಟ್ಟಪ್ಪ, ಸಿದ್ದಪ್ಪ ದೊಡ್ಡಮನಿ, ಮಹಾಂತೇಶ್ ಕಮಲಾಪುರ, ಕರಿಬಸಪ್ಪ, ನಾಗರಾಜ್, ಶ್ರೀನಿವಾಸ್, ಲಕ್ಷ್ಮಪ್ಪ, ನಾರಾಯಣಪ್ಪ, ಮಂಜಪ್ಪ, ಶಿವು, ಧನ್ಯಕುಮಾರ್, ಜಯಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!