ದಾವಣಗೆರೆ, ಜ.16- ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭತ್ತ ಸಂಸ್ಕರಣಾದಾರರ ಸಂಘ ಇಂದು ಅಸ್ತಿತ್ವಕ್ಕೆ ಬಂದಿದ್ದು, ಅದರ ಉದ್ಘಾಟನಾ ಸಮಾರಂಭ ನಗರದ ಬಂಬೂ ಬಜಾರ್ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಮತ್ತು ವರ್ತಕ ಜಿ.ಎಸ್. ಉಳುವಯ್ಯ ನೆರವೇರಿಸಿದರು. ಪ್ರಥಮ ಅಧ್ಯಕ್ಷರಾಗಿ ಎಚ್.ಎಂ. ನಾಗರಾಜ್, ಉಪಾಧ್ಯಕ್ಷರು ಜಬಿ ಉಮೇಶ್, ಗೌ. ಅಧ್ಯಕ್ಷರಾಗಿ ಎಂ. ದೊಡ್ಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎ. ರಮೇಶ್, ಖಜಾಂಚಿಯಾಗಿ ನಾಗರಾಜ್ ಸಜ್ಜನ್, ಸಹಕಾರದರ್ಶಿಯಾಗಿ ಶ್ರೀಧರ್ಗೌಡ ಎಸ್.ಆರ್.ಎ ಇವರುಗಳು ಅವಿರೋದವಾಗಿ ಆಯ್ಕೆಯಾದರು.
ಭತ್ತದ ವ್ಯಾಪಾರಸ್ಥರಿಗೆ ಆಗುವ ಕೆಲವು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಈ ಬಗ್ಗೆ ಅನೇಕ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ನೂತನ ಅಧ್ಯಕ್ಷ ಎಚ್.ಎಂ. ನಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಕ್ಲಬ್ ಅಧ್ಯಕ್ಷ ಎ.ಬಿ. ಚಂದ್ರಶೇಖರ್, ಕೋರಿ ಹಿರಿಯಣ್ಣ, ಟಿ.ಸಿ. ಲಿಂಗಪ್ಪ, ಮಳಗಿ ಪರಪ್ಪ, ಮಹಾದೇವಯ್ಯ, ಭಾರಿಮನಿ ಷಣ್ಮುಖಪ್ಪ, ರಸೂಲ್ ಖಾನ್ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೆಶಕರಾದ ಕುಂಟೋಜಿ ಚನ್ನಪ್ಪ, ಸುರೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎ.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿದರು.