ಮಲೇಬೆನ್ನೂರು, ಜ. 17 – ಹರಿಹರ ತಾಲ್ಲೂಕು ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಸರ್ಕಾರ ರಚಿಸಿ, ನೂತನ ಸದಸ್ಯರನ್ನು ನೇಮಕ ಮಾಡಿದೆ. ಅಧ್ಯಕ್ಷರಾಗಿ ಶಾಸಕ ಬಿ.ಪಿ. ಹರೀಶ್, ಸದಸ್ಯರಾದ ಎಳೆಹೊಳೆ ಗ್ರಾಮದ ಹೆಚ್.ಬಿ. ಚಂದ್ರಶೇಖರ್, ವಾಸನದ ಶ್ರೀಮತಿ ಸವಿತಾ ಮಾಂತೇಶ್ ಮತ್ತು ಸದಸ್ಯ ಕಾರ್ಯದರ್ಶಿಯನ್ನಾಗಿ ತಹಶೀಲ್ದಾರ್ ಅವರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ನೂತನ ಸದಸ್ಯರನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ ತಿಳಿಸಿದ್ದಾರೆ.