ಭದ್ರಾ ಬಲ ನಾಲೆಗೆ ನೀರು ಬಿಡುಗಡೆ

ಶಿವಮೊಗ್ಗ, ಜ. 16- ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಸೋಮವಾರ ತಡ ರಾತ್ರಿಯಿಂದ ನೀರು ಬಿಡುಗಡೆ ಮಾಡಲಾಗಿದೆ.

ಮಂಗಳವಾರ ಬೆಳಗ್ಗೆ ಮಾಹಿತಿ ಪ್ರಕಾರ 700 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಬುಧವಾರ ಬೆಳಗ್ಗೆ ವೇಳೆಗೆ 1500 ಕ್ಯೂಸೆಕ್ಸ್ ಗೆ ಏರಿಕೆ ಆಗಲಿದೆ. ಜ. 6 ರಂದು ನಡೆದ ಭದ್ರಾ ಕಾಡಾ ಸಭೆಯಲ್ಲಿ ಜ. 20 ರಿಂದ ಆಫ್ ಅಂಡ್ ಆನ್ ಪದ್ಧತಿಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿತ್ತು.

ನಂತರ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದ್ದು, ಜ. 15 ರಿಂದ 12 ದಿನ ನಾಲೆಯಲ್ಲಿ ನೀರು ಹರಿಸಲು ಸೂಚನೆ ನೀಡಲಾಗಿತ್ತು. ಆ ಪ್ರಕಾರ ಸೋಮವಾರ ರಾತ್ರಿಯಿಂದ ಬಲದಂಡೆ ನಾಲೆಗೆ ನೀರು ಬಿಡಲಾಗಿದೆ. 

error: Content is protected !!