ಹರಿಹರ, ಜ.16- ದೇವರಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾರತ ಸೇವಾ ದಳದ ಶತಮಾನೋತ್ಸವ ಪ್ರಯುಕ್ತ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನೂ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಚನ್ನಪ್ಪ ಅವರು, ವಿವೇಕಾನಂದರ ಜನ್ಮದಿನದ ಸಂದರ್ಭ ದಲ್ಲಿ ಕಾರ್ಯಕ್ರಮ ಉದ್ಘಾಟಿಸಿರುವುದು ಸಂತಸದ ಸಂಗತಿ. ವೀರ ಸನ್ಯಾಸಿಯಾದ ಅವರು `ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಮಾತನ್ನು ಮಕ್ಕಳಿಗೆ ಅರ್ಥಪೂರ್ಣವಾಗಿ ವಿವರಿಸಿ, ವಿದ್ಯಾರ್ಥಿಗಳು ಭವಿಷ್ಯತ್ತಿನ ಭಾರತದ ಸತ್ಪ್ರಜೆಗಳಾಗಲು ಕರೆ ನೀಡಿದರು.
ಶಿಕ್ಷಕರಾದ ಕು. ಆಯಿಷಾ ಸಿದ್ದಿಕಾ ಮಾತ ನಾಡಿ, ವಿವೇಕಾನಂದರ ಹಾಗೂ ಸೇವಾದಳ ನಡೆದು ಬಂದ ದಾರಿಯನ್ನು ಮನಮುಟ್ಟುವಂತೆ ವಿವರಿಸಿದರು. ಕಾರ್ಯದರ್ಶಿ ಆರ್.ಆರ್.ಮಠ ಮಾತನಾಡಿ, ತಾಲ್ಲೂಕು ಹಂತದ ಮಕ್ಕಳ ಭಾವೈಕ್ಯತಾ ಮೇಳ ಆಯೋಜಿಸುವ ಕುರಿತು ವಿಷಯ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಲತಾ ಕೊಟ್ರೇಶ್, ಕಾರ್ಯಕರ್ತರಾದ ಕೆ.ಪಿ.ಬಸವರಾಜಪ್ಪ, ಜಿಲ್ಲಾ ಪ್ರತಿನಿಧಿ ಎಸ್.ಸಿದ್ದಲಿಂಗಪ್ಪ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಸೀತಮ್ಮ ತಿಪ್ಪೇಶ್, ಕೋಶಾಧ್ಯಕ್ಷ ಡಾ. ಎ.ಕೆ.ಮಂಜಪ್ಪ, ಎಸ್ಡಿಎಂಸಿ ಸದಸ್ಯರು, ಗ್ರಾ.ಪಂ. ಉಪಾಧ್ಯಕ್ಷರಾದ ಐ.ಎಸ್.ಮಲ್ಲಿಕಾರ್ಜುನ್, ಪ್ರೌಢಶಾಲಾ ಮುಖ್ಯಸ್ಥ ಕೆ.ಜಿ.ಬಸವನಗೌಡ್ರು, ತಾಲ್ಲೂಕು ಸಮಿತಿ ಕಾರ್ಯದರ್ಶಿ ಆರ್.ಆರ್.ಮಠ, ಸದಸ್ಯರಾದ ಆರ್.ಬಿ.ಮಲ್ಲಿಕಾರ್ಜುನ್ ಹಾಗೂ ಶಾಲಾ ಮುಖ್ಯಸ್ಥ ಎಸ್.ಟಿ.ಕುಮಾರಸ್ವಾಮಿ ಅವರುಗಳು ಭಾಗವಹಿಸಿದ್ದರು. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಟಿ.ಎಸ್.ಕುಮಾರಸ್ವಾಮಿ ಸ್ವಾಗತಿ ಸಿದರು. ಕು. ಶಂಕ್ರವ್ವ ಹುಲ್ಮನಿ ಪ್ರಾರ್ಥಿಸಿದರು. ಶಿಕ್ಷಕ ಆರ್.ಬಿ.ಮಲ್ಲಿಕಾರ್ಜುನ್ ನಿರೂಪಿಸಿದರು.