ದಾವಣಗೆರೆ, ಜ. 16 – ನಗರದ ಡಿಸಿಎಂ ಟೌನ್ಶಿಪ್ನಲ್ಲಿರುವ ಲಿಟ್ಲ್ ಚಾಂಪ್ಸ್ ಸ್ಕೂಲ್ನಲ್ಲಿ ಮಕ್ಕಳು, ಶಿಕ್ಷಕಿಯರು ಹಾಗೂ ಪೋಷಕರು ಜೊತೆಗೂಡಿ ದವಸ ಧಾನ್ಯ, ಕಬ್ಬಿನ ರಾಶಿಗಳಿಗೆ ಪೂಜೆ ಸಲ್ಲಿಸಿ, ಎಳ್ಳು-ಬೆಲ್ಲವನ್ನು ಪರಸ್ಪರ ಹಂಚಿ-ಸವಿದು, ಪಟ-ಪಟ ಹಾರೋ ಗಾಳಿಪಟ ಎಂಬ ಹಾಡಿಗೆ ನೃತ್ಯ ಮಾಡುತ್ತಾ, ಆಕಾಶದಲ್ಲಿ ವಿವಿಧ ರೀತಿಯ ಬಣ್ಣಗಳ ಗಾಳಿಪಟಗಳ್ನು ಹಾರಿಸಿ, ಎಲ್ಲರೂ ಕುಣಿದು, ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ಅಧ್ಯಕ್ಷ ಕಿರಣ್ಕುಮಾರ್, ನಿರ್ದೇಶಕರಾದ ಶ್ರೀಮತಿ ಸಹನಾ, ಶ್ರೀಮತಿ ಸ್ನೇಹಾ, ಮುಖ್ಯೋಪಾಧ್ಯಾಯರು, ಶಿಕ್ಷಕಿಯರಾದ ನಾಗವೇಣಿ, ವಿಜಯಲಕ್ಷ್ಮಿ, ಆಶಾ ಕಾವ್ಯ, ಶೋಭಾ, ಗಂಗಾ, ಲಾವಣ್ಯ ಹಾಗೂ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.