ದಾವಣಗೆರೆ, ಜ. 13 – ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2022-23ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ (ಎನ್ಎಸ್ಪಿ / ಎಸ್ಎಸ್ಪಿ) ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿಯೂ ವಿದ್ಯಾರ್ಥಿ ವೇತನ ಮಂಜೂರಾಗದೇ ಹೋದರೆ ವಿದ್ಯಾ ಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ವಿಶ್ವವಿದ್ಯಾಲ ಯದ ಇಮ್ರಾನ್ ಎ. ಮತೀನ್. ಮಹಬೂಬ್ ಮತ್ತಿತರರು ಮನವಿ ಸಲ್ಲಿಸಿದ್ದಾರೆ.
February 6, 2025