ರಾಮಗೊಂಡನಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವ

ರಾಮಗೊಂಡನಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವ

ದಾವಣಗೆರೆ, ಜ. 13 – ಇಲ್ಲಿಗೆ ಸಮೀಪದ ರಾಮಗೊಂಡನಹಳ್ಳಿ ಯಲ್ಲಿ ಇಂದು ನಡೆದ ಶಿವಸಂಚಾರ -2023ರ ನಾಟಕೋತ್ಸ ವವನ್ನು ಕರ್ನಾಟಕದ ಖ್ಯಾತ ಜಾನಪದ ಕಲಾವಿದರೂ, ಲಾವಣಿ ಪದ ತಜ್ಞ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ವಿನೀತ ಭಕ್ತರಾದ ಶ್ರೀ ಸಿದ್ಧನಮಠದ ಯುಗಧರ್ಮ ರಾಮಣ್ಣ ಅವರು ಉದ್ಘಾಟಿಸಿದರು.

ಒಂದನೇ ತರಗತಿಯಲ್ಲಿ ಐದು ಸಲ ಫೇಲಾದ ನನ್ನನ್ನು  ನಾಡು ಜಾನಪದ ತಜ್ಞ ಎಂದು ಗುರುತಿಸುವಂತೆ ಆಶೀ ರ್ವಾದ ಮಾಡಿದ ಗುರುವಿನ ಪಾದಕ್ಕೆ ಈ ಜ್ಞಾನ ಅರ್ಪಿಸಿ ಕೊಂಡ ಜೀವ ಇದು ಎಂದು ಯುಗಧರ್ಮ ರಾಮಣ್ಣ ತಿಳಿಸಿದರು. 

ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ರಂಗ ಭೂಮಿಯ ಮೂಲಕ ನಡೆಸುತ್ತಿರುವ ಈ ಕ್ರಾಂತಿ ಅಧ್ಭುತ ಹಾಗೂ ಎಲ್ಲಾ ವಯೋಮಾನದ ಜನರನ್ನು  ಎಚ್ಚರಿಸುವ ರೀತಿ ಅತ್ಯಂತ ಶ್ಲ್ಯಾಘನೀಯ ಸೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ಅವರಗೆರೆ ರುದ್ರಮುನಿ ಅವರು, ರಂಗಭೂಮಿ ಸೇವೆಗೆ ರಾಮಗೊಂಡನಹಳ್ಳಿ ಎಂದಿನಿಂದಲೂ ಸ್ಪಂದಿಸುವ ಗುಣ ಮತ್ತು ರೀತಿ ಎಲ್ಲಾ ಗ್ರಾಮಗಳಿಗೂ ಅನುಕರಣೀಯ ನಡೆ ಎಂದು ಹೇಳಿದರು.

2014 ರಿಂದಲೂ  ರಾಮಗೊಂಡನಹಳ್ಳಿಯಲ್ಲಿಯ  ಜಿ.ಎಸ್‌. ಸುರೇಂದ್ರ ಹಾಗೂ ಸ್ನೇಹಿತರು ನಡೆಸುತ್ತಿರುವ ಈ ರಂಗ ಸೇವೆ ಅತ್ಯಂತ ಮೌಲ್ಯಕ ಹಾಗೂ ಅನುಕರಣೀಯ ನಡೆ ಎಂದು ಅವರಗೆರೆ ರುದ್ರಮುನಿ ಶ್ಲ್ಯಾಘಿಸಿದರು.

ಪ್ರಾರ್ಥನೆಯನ್ನು ಗೌತಮಿ ನಡೆಸಿಕೊಟ್ಟರು. ಆರಂಭದಲ್ಲಿ ಸ್ವಾಗತಿಸಿದ ಜಿ.ಎಸ್‌. ಸುರೇಂದ್ರ ಕಾರ್ಯಕ್ರಮ ನಿರೂಪಿಸಿದರು.

error: Content is protected !!