ಮಲೇಬೆನ್ನೂರು, ಜ. 13 – ಪಟ್ಟಣದ ಹೊರವಲಯದಲ್ಲಿರುವ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿಗಳ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಲಯ ಮೇಲ್ವಿಚಾರಕರು ಸ್ವಚ್ಛತಾ ಕಾರ್ಯ ಕೈಗೊಂಡರು.
ಡಾ. ವೀರೇಂದ್ರ ಹೆಗ್ಗಡೆ ಅವರ ಸಂಕಲ್ಪದಂತೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ವರ್ಷದಲ್ಲಿ ಎರಡು ಬಾರಿ ಈ ಸ್ವಚ್ಛತಾ ಅಭಿಯಾನ ಮಾಡಲಾಗುವುದುದೆಂದು ಯೋಜನಾಧಿಕಾರಿ ವಸಂತ್ ದೇವಾಡಿಗ ಜನತಾವಾಣಿಗೆ ತಿಳಿಸಿದರು.
ಧರ್ಮಸ್ಥಳ ಯೋಜನೆಯ ಸಿಬ್ಬಂದಿಗಳು ಕೈಗೊಳ್ಳುವ ಸ್ವಚ್ಛತಾ ಕಾರ್ಯವನ್ನು ವೀರಭದ್ರೇಶ್ವರ ದೇವಸ್ಥಾನದ ಸಮಿತಿ ಉಪಾಧ್ಯಕ್ಷ ಬಿ. ಚಿದಾನಂದಪ್ಪ ಅಭಿನಂದಿಸಿದರು. ಯೋಜನಾಧಿಕಾರಿಗಳ ಕಛೇರಿಯ ಹಣಕಾಸು ಪ್ರಬಂಧಕ ಶ್ರೀಕಾಂತ್, ಸಹಾಯಕ ವ್ಯವಸ್ಥಾಪಕಿ ಐಶ್ವರ್ಯ ಕಛೇರಿ ಸಹಾಯಕರಾದ ಪೂಜಾ, ರೇಷ್ಮಾ, ರಕ್ಷಿತಾ, ಮಂಜುನಾಥ್, ಹನುಮಂತಪ್ಪ, ವಲಯ ಮೇಲ್ವಿಚಾರಕರಾದ ಚಂದ್ರಪ್ಪ, ಹರೀಶ್, ಸಂಪತ್ಲಕ್ಷ್ಮಿ, ರಕ್ಷಿತಾ, ಸಂತೋಷಿನಿ, ರಂಜಿತಾ, ರಂಗಸ್ವಾಮಿ, ಮಾರುತಿಗೌಡ, ಗಂಗಾಧರ್, ಸವಿತಾ, ಆಶಾ, ಸೇರಿದಂತೆ ಸೇವಾ ಪ್ರತಿನಿಧಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.