ಭಾನುವಳ್ಳಿ : ಸತ್ಯಾಗ್ರಹಕ್ಕೆ ನಾಯಕ ಸಮಾಜ ಬೆಂಬಲ

ಭಾನುವಳ್ಳಿ : ಸತ್ಯಾಗ್ರಹಕ್ಕೆ ನಾಯಕ ಸಮಾಜ ಬೆಂಬಲ

ಮಲೇಬೆನ್ನೂರು, ಜ.14- ಭಾನುವಳ್ಳಿ ಗ್ರಾಮದ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲೇ ಅನಧಿಕೃತವಾಗಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ತೆರವು ಗೊಳಿಸುವಂತೆ ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ಸೋಮವಾರ 7ನೇ ದಿನಕ್ಕೆ ಕಾಲಿಟ್ಟಿದೆ.

ಈ ದಿನ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ್, ಹರಿಹರ ನಗರಸಭೆ ಸದಸ್ಯ ದಿನೇಶ್ ಬಾಬು, ಹಿರಿಯ ವಕೀಲ ಎನ್.ಎಂ.ಆಂಜನೇಯ ಗುರೂಜಿ, ಶ್ಯಾಗಲೆ ಮಂಜುನಾಥ್, ದೇವರಬೆಳಕೆರೆ ಮಹೇಶ್ವರಪ್ಪ, ಕೊಕ್ಕನೂರು ಸೋಮಶೇಖರ್, ಹರಿಹರದ ಪಾರ್ವತಿ ಬೋರಯ್ಯ, ಮಕರಿ ಪಾಲಾಕ್ಷಪ್ಪ, ಭಾನುವಳ್ಳಿ ಗ್ರಾಮದ ಟಿ.ಪುಟ್ಟಪ್ಪ, ಸಿದ್ದಪ್ಪ ದೊಡ್ಡಮನಿ, ಮಹಾಂತೇಶ್ ಕಮಲಾಪುರ, ಕರಿಬಸಪ್ಪ, ನಾಗರಾಜ್, ಶ್ರೀನಿವಾಸ್, ಲಕ್ಷ್ಮಪ್ಪ, ನಾರಾಯಣಪ್ಪ, ಮಂಜಪ್ಪ, ಹನುಮಂತಪ್ಪ, ಗ್ರಾ.ಪಂ. ಸದಸ್ಯರಾದ ಗಿರಿಜಮ್ಮ ಜಯ್ಯಪ್ಪ, ಟಿ.ಧನ್ಯಕುಮಾರ್, ಶಿವಬೆಳ ಕೊಂಡರ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!