ಜಗಳೂರು : ಕಣ್ವಕುಪ್ಪಿ ಗವಿಮಠದ ಶಾಂತಲಿಂಗೇಶ್ವರ ರಥೋತ್ಸವ

ಜಗಳೂರು : ಕಣ್ವಕುಪ್ಪಿ ಗವಿಮಠದ ಶಾಂತಲಿಂಗೇಶ್ವರ ರಥೋತ್ಸವ

ಜಗಳೂರು, ಜ. 15 – ತಾಲ್ಲೂಕಿನ ತಪೋ ಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಇಂದು ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶಾಂತಲಿಂಗೇಶ್ವರ ರಥೋತ್ಸವ ಸಂಭ್ರಮ ದಿಂದ ನೆರವೇರಿತು.

ಪಟ್ಟಾಧ್ಯಕ್ಷರಾದ ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮಿಗಳು ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು. ಇಂದು ಮಧ್ಯಾಹ್ನ ರಥೋತ್ಸವ ನೆರವೇರುತ್ತಿದ್ದಂತೆ ಭಕ್ತರು ಭಾವ ಪರವಶರಾಗಿ ಬಾಳೆ ಹಣ್ಣು, ತೆಂಗಿನ ಕಾಯಿ, ಸಮರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ಪ್ರತಿ ವರ್ಷವೂ ಮಕರ ಸಂಕ್ರಾಂತಿಯ ಪುಣ್ಯ ಪರ್ವ ಕಾಲದಲ್ಲಿ ಗದ್ದುಗೆಗಳಿಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನೆರವೇರುತ್ತದೆ.

ರಥೋತ್ಸವದ ಅಂಗವಾಗಿ ಎಲ್ಲ ಸರ್ವ ಭಕ್ತರಿಗೂ ಅನ್ನ ಸಂತರ್ಪಣೆ ನೆರವೇರಿತು. ಈ ಜಾತ್ರಾ ಮಹೋತ್ಸವ ದಲ್ಲಿ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಜಿಲ್ಲೆ ಸೇರಿ ದಂತೆ ಆಂಧ್ರಪ್ರದೇಶ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಥೋತ್ಸವದ ನಂತರ ಶ್ರೀಗಳು  ಭಕ್ತರಿಗೆ ಮಕರ ಸಂಕ್ರಾಂತಿ ಪುಣ್ಯ ಉತ್ತರಾಯಣ ಕಾಲದ ದರ್ಶನ ಆಶೀರ್ವಾದ ನೀಡಿದರು.

error: Content is protected !!