ಧರ್ಮಸ್ಥಳ : ಅಕ್ಕಿ ಸಮರ್ಪಣೆಯ ಪೂಜೆ

ಧರ್ಮಸ್ಥಳ : ಅಕ್ಕಿ ಸಮರ್ಪಣೆಯ ಪೂಜೆ

ದಾವಣಗೆರೆ, ಜ.11- ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅನ್ನ ಸಂತರ್ಪಣೆಗಾಗಿ ಕಳುಹಿಸಿಕೊಡುವ 24ನೇ ವರ್ಷದ ಅಕ್ಕಿ ಸಮರ್ಪಣೆಯ ಪೂಜೆ ಮತ್ತು ಶ್ರೀ ಮಂಜುನಾಥಸ್ವಾಮಿ ಪೂಜಾ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 13 ನೇ ಶನಿವಾರ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

ಸಂಗೀತ ಕಾರ್ಯಕ್ರಮದಲ್ಲಿ 6 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6.30 ಕ್ಕೆ ಪೂಜೆ 7.20 ಕ್ಕೆ ಪ್ರಸಾದ ಕಾರ್ಯಕ್ರಮವನ್ನು ಕೆ.ಬಿ. ಬಡಾವಣೆಯ ಕೆನರಾ ಬ್ಯಾಂಕ್ ಹಿಂಭಾಗದಲ್ಲಿರುವ ಓಂ ಶ್ರೀ ಮಂಜುನಾಥಸ್ವಾಮಿ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಣಬೇರಿನ ಶ್ರೀಮತಿ ಲಿಂ. ದ್ಯಾಮಮ್ಮನವರ ಮಗ ಲಿಂ. ದೇವೇಂದ್ರಪ್ಪನವರ ಮಗ ಅಣಬೇರು ಮಂಜಣ್ಣ, ಲತಾ ಮಂಜಣ್ಣ ಮತ್ತು ಮಕ್ಕಳು, ಮೊಮ್ಮಕ್ಕಳು ಕಾರ್ಯಕ್ರಮದ ಸೇವಾಕರ್ತರಾಗಿರುತ್ತಾರೆ.

error: Content is protected !!