ಹೆಬ್ಬಾಳು ವಿರಕ್ತಮಠದ ಶ್ರೀ ಗುರು ಶಿವಯೋಗಿ ಮಹಾರುದ್ರ ಮಹಾಸ್ವಾಮಿಗಳವರ ಪುರಾಣ – ಪ್ರವಚನವು ಇಂದಿನಿಂದ ಒಂದು ತಿಂಗಳ ಪರ್ಯಂತ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಪುರಾಣ – ಪ್ರವಚನವನ್ನು ಏರ್ಪಡಿಸಲಾಗಿದ್ದು, ಪಂಡಿತ ಶ್ರೀ ಪುಟ್ಟರಾಜ ಕವಿ ಗವಾಯಿಯವರ ಶಿಷ್ಯರಾದ ಕಲ್ಬುರ್ಗಿ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತಿಗಳು ಪ್ರವಚನವನ್ನು ನಡೆಸಿಕೊಡಲಿದ್ದಾರೆ. ಈ ವರ್ಷ 48ನೇ ವರ್ಷದ ಪ್ರವಚನವಾಗಿದೆ.
ಹೆಬ್ಬಾಳು ಶ್ರೀ ರುದ್ರೇಶ್ವರ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಶ್ರೀ ಕಲ್ಲಯ್ಯ ಅಜ್ಜನವರ ನೇತೃತ್ವದಲ್ಲಿ ಇಂದು ಸಂಜೆ 6.30ಕ್ಕೆ ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭ ಜರುಗಲಿದೆ.
ಮುಖ್ಯ ಅತಿಥಿಗಳು : ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ, ಮಾಗಾನಹಳ್ಳಿ ಶಿವಾನಂದಪ್ಪ, ಎಂ. ಸಿದ್ದಲಿಂಗಪ್ಪ, ಡಿ. ನಾಗರಾಜಪ್ಪ, ಎಸ್.ಕೆ. ಮೋಹನ್, ಎ.ಹೆಚ್ ಸಿದ್ದಲಿಂಗಸ್ವಾಮಿ, ಎಂ. ಬಸವರಾಜ್.
ಶ್ರೀ ಮುರುಘೇಂದ್ರ ಶಿವಯೋಗೀಶ್ವರ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಪುರಾಣ ಪ್ರಚವನ ಆಯೋಜನೆ ಗೊಂಡಿದ್ದು, ಸದ್ಭಕ್ತರು ಪ್ರಚವನದಲ್ಲಿ ಭಾಗವಹಿಸುವಂತೆ ಸಂಚಾಲಕರಾದ ಅಜ್ಜಂಪುರ ಶೆಟ್ರು ಮೃತ್ಯುಂಜಯ, ರುದ್ರೇಶ್ ಮತ್ತು ಸಿ.ಕೆ. ಬಸವರಾಜಪ್ಪ ಕೋರಿದ್ದಾರೆ.