ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಿ

ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಿ

ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಸಲ್ಲಿಕೆ

ದಾವಣಗೆರೆ, ಜ.11-  ಸ್ಕೀಮ್ ವರ್ಕರ್ಸ್‌ ಗಳಾದ ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಯೂಟ ತಯಾರಕರು ಮತ್ತು ಆಶಾ ಕಾರ್ಯ ಕರ್ತೆಯರಿಗೆ ವೇತನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾವು ಕೂಡ ಒತ್ತಾಯಿಸಬೇಕೆಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ನಗರದ ಜಿಎಂಐಟಿ ಕ್ಯಾಂಪಸ್‌ನ ಆವರಣ ದಲ್ಲಿರುವ ಅತಿಥಿ ಗೃಹಕ್ಕೆ ತೆರಳಿ ಎಐಟಿಯುಸಿ ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಮತ್ತು ಬಿಸಿಯೂಟ ತಯಾರಕರ ಸಂಘಟನೆ ಕಾರ್ಯಕರ್ತೆಯರು ಸಂಸದ ಸಿದ್ದೇಶ್ವರ ಅವರನ್ನು ಭೇಟಿ ಮಾಡಿ ಸ್ಕೀಮ್ ವರ್ಕರ್ಸ್ ಗಳಿಗೆ ಕೆಲಸ ಹೆಚ್ಚುವರಿಯಾಗಿದೆ. ಕೆಲಸಕ್ಕೆ ತಕ್ಕಂತೆ ವೇತನ ದೊರೆಯುತ್ತಿಲ್ಲ ಎಂದು ಸಂಸದರ ಗಮನಕ್ಕೆ ತಂದು ಮುಂಬರುವ ಬಜೆಟ್‌ನಲ್ಲಿ ಸ್ಕೀಮ್ ವರ್ಕರ್ಸ್‌ಗಳಿಗೆ ಕನಿಷ್ಠ ವೇತನ ಜಾರಿಗೊಳಿಸುವುದು, ನಿವೃತ್ತಿ ಪಿಂಚಣಿ ಜಾರಿಗೊಳಿಸುವುದು, ಆರೋಗ್ಯ ವಿಮೆ, ಗ್ರಾಚ್ಯುಟಿ, ಮರಣ ಪರಿಹಾರ ಹಾಗೂ ಮತ್ತಿತರೆ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಒತ್ತಾಯ ಮಾಡಬೇಕೆಂದರು. ಇದಕ್ಕೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ, ಮುಖಂಡರುಗಳಾದ ನಿರ್ಮಲ, ಗೀತಾ, ರೇಣುಕಮ್ಮ, ಅಶ್ವಿನಿ, ಜಿಲ್ಲಾ ಸಂಚಾಲಕ ಆವರಗೆರೆ ವಾಸು,ಎಐವೈಎಫ್ ನ ಕೆರನಹಳ್ಳಿ ರಾಜು ಸುಶೀಲಮ್ಮ, ಭರಮಕ್ಕ, ಬಿಸಿಯೂಟ ತಯಾರಕರ ಮುಖಂಡರುಗಳಾದ ಸರೋಜ, ಜ್ಯೋತಿ ಲಕ್ಷ್ಮಿ, ಪದ್ಮಾ, ಸುಭದ್ರಮ್ಮ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!