ನಗರದಲ್ಲಿಂದು ಶಾಲಾ ವಾರ್ಷಿಕೋತ್ಸವ

ಆನೆಕೊಂಡದಲ್ಲಿರುವ ಆಕ್ಸ್‌ಫರ್ಡ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಆಕ್ಸ್‌ಫರ್ಡ್‌ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಇವುಗಳ ವಾರ್ಷಿಕೋತ್ಸವ ಸಮಾರಂಭ ಇಂದು ಮಧ್ಯಾಹ್ನ 3 ಗಂಟೆಗೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ ಕಾರ್ಯಕ್ರಮ ಉದ್ಘಾಟಿಸುವರು. ಕೆ.ಸಿ. ಲಿಂಗರಾಜು ಪ್ರಾಸ್ತಾವಿಕ ನುಡಿಗಳನ್ನಾಡುವರು. ಮಾಗನೂರು ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳು : ಬಿ. ವಾಮದೇವಪ್ಪ, ಜಿ. ಕೊಟ್ರೇಶಿ, ಮಂಜುನಾಥ ಏಕಬೋಟೆ, ಕಿರಣ್‌ಕುಮಾರ್‌.

error: Content is protected !!