ಹರಿಹರ ತಾಲ್ಲೂಕಿನ ಸುಕ್ಷೇತ್ರ ಕಾಶಿ ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆ ಇಂದು ಬೆಳಗ್ಗೆಯಿಂದ ರಾತ್ರಿವರೆಗೆ ಜರುಗಲಿದೆ. ನಾಳೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಮಹೇಶ್ವರ ಸ್ವಾಮಿಗೆ ಮನೆಗಳಿಂದ ಎಡೆ ಕೊಡಲಾಗುವುದು. ನಂತರ ಬಾಯಿ ಬೀಗ, ದಿಂಡು ಉರುಳು ಸೇವೆ ನಡೆಯಲಿದ್ದು, ಸಂಜೆ 4 ಗಂಟೆಗೆ ಶ್ರೀ ರೇವಣಸಿದ್ದೇಶ್ವರ, ಶ್ರೀ ಬಸವೇಶ್ವರ ಸ್ವಾಮಿಯ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ. ರಾತ್ರಿ 10.30ಕ್ಕೆ ಗ್ರಾಮದ ಕಲಾವಿದರಿಂದ ನಾಟಕ ಪ್ರದರ್ಶನ ಇರುತ್ತದೆ.
December 26, 2024