ಹದಡಿ : ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ಮುಳ್ಳು ಗದ್ದಿಗೆ

ಹದಡಿ : ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ಮುಳ್ಳು ಗದ್ದಿಗೆ

ದಾವಣಗೆರೆ  ತಾಲ್ಲೂಕಿನ ಹದಡಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ ಮತ್ತು ಮುಳ್ಳುಗದ್ದಿಗೆ ಜಾತ್ರೆ ಹಾಗೂ ಕೆಂಡದಾ ರ್ಚನೆ ಮಹೋತ್ಸವ ಮತ್ತು ಮಹಾಸ್ವಾಮಿಯ ಜಾತ್ರೋತ್ಸವವು ಇಂದು ನಡೆಯಲಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಕೆಂಡದ ಗದ್ದುಗೆಗೆ ಜ್ಯೋತಿ,  ಮೆರವಣಿಗೆ, ಕೆಂಡದ ಗದ್ದಿಗೆಗೆ ಜ್ಯೋತಿ ಹಚ್ಚುವುದು, ಮಧ್ಯಾಹ್ನ 2 ಗಂಟೆಗೆ ಶ್ರೀ ಬೀರಲಿಂಗೇಶ್ವರ ದೇವರು, ಶ್ರೀ ಆಂಜನೇಯ ಸ್ವಾಮಿ ದೇವರು, ಶ್ರೀ ದಂಡಿ ದುರುಗಮ್ಮ ದೇವಿ, ಶ್ರೀ ಮಸಿಯಾಂಬಿಕಾ ದೇವಿ, ಶ್ರೀ ಹೊರಟ್ಟಿ ದುರುಗಮ್ಮ ದೇವಿ ದೇವರುಗಳು ಹೊಳೆ ಪೂಜೆ ಮಾಡಿ, ಹಲಗೆ, ಡೊಳ್ಳುಗಳ ಮೆರವಣಿಗೆ, ಪೂಜೆ ನಡೆದು, ಮಧ್ಯಾಹ್ನ 3 ಗಂಟೆಗೆ ಹೊರಟ್ಟಿ ದುಗ್ಗಮ್ಮ, ಮಸಿಯಮ್ಮ, ಆಂಜನೇಯಸ್ವಾಮಿ, ದಂಡಿ ದುರುಗಮ್ಮ ದೇವರುಗಳೊಂದಿಗೆ ಬೀರಲಿಂಗೇಶ್ವರರು ಮುಳ್ಳು ಗದ್ದಿಗೆ ಏರಿ ಮೆರವಣಿಗೆ ನಡೆಯುವುದು.

error: Content is protected !!