ಭರಮಸಾಗರದ ಕೆ.ಯು. ಶ್ರೀಧರಮೂರ್ತಿ ಅವರಿಗೆ ಪಿಹೆಚ್‌ಡಿ

ಭರಮಸಾಗರದ ಕೆ.ಯು. ಶ್ರೀಧರಮೂರ್ತಿ ಅವರಿಗೆ ಪಿಹೆಚ್‌ಡಿ

ದಾವಣಗೆರೆ, ಜ.8- ಭರಮಸಾಗರದ ಕೆ.ಯು. ಶ್ರೀಧರಮೂರ್ತಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಹೆಚ್‌ಡಿ ಪದವಿಗೆ ಭಾಜನರಾಗಿದ್ದಾರೆ. 

ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ ಶ್ರೀಧರಮೂರ್ತಿ  ಅವರು ಶಾಸನಶಾಸ್ತ್ರ ವಿಭಾಗದಲ್ಲಿ  ಮಂಡಿಸಿದ `ಪ್ರಾಚೀನ ಕರ್ನಾಟಕದಲ್ಲಿ ಶಾಕ್ತ ಪರಂಪರೆ’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ದೊರೆತಿದೆ. ನಾಡಿದ್ದು ದಿನಾಂಕ 10 ರಂದು ಜರುಗಲಿರುವ ಕನ್ನಡ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ‌ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಅವರುಗಳು ಪದವಿ ಪ್ರದಾನ ಮಾಡಲಿದ್ದಾರೆ.

ಶ್ರೀಧರಮೂರ್ತಿ, ಭರಮಸಾಗರ ಗ್ರಾಮದ ಬಡ್ತಿ ಮುಖ್ಯ ಶಿಕ್ಷಕರಾದ ಶ್ರೀಮತಿ ವಿ. ಎಂ. ಅಕ್ಕಮಹಾದೇವಿ ಹಾಗೂ ಭೂಮಾಪನ ಇಲಾಖೆ ನಿವೃತ್ತ ನೌಕರ ಕೆ‌.ಎಂ. ಉಮೇಶಚಾರ್  ದಂಪತಿ ಪುತ್ರ.

error: Content is protected !!