ದಾವಣಗೆರೆ, ಜ. 7 – ನಗರದ ಡಿಸಿಎಂ ಟೌನ್ಶಿಪ್ನಲ್ಲಿರುವ ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟವನ್ನು ಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಪ್ಲೇ ಗ್ರೂಪ್ನಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಎಲ್ಲಾ ಪೋಷಕರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ಅಧ್ಯಕ್ಷ ಕಿರಣ್ಕುಮಾರ್, ನಿರ್ದೇಶಕರಾದ ಶ್ರೀಮತಿ ಸಹನ, ಶ್ರೀಮತಿ ಸ್ನೇಹ ಶಾಲಾ ಮುಖೋಪಾಧ್ಯಾಯರು ಹಾಜರಿದ್ದರು. ಶ್ರೀಮತಿ ಶೋಭಾ ನಿರೂಪಿಸಿದರು. ಆಶಾ ಪ್ರಾರ್ಥಿಸಿದರೆ, ಶ್ರೀಮತಿ ಕಾವ್ಯ ಸ್ವಾಗತಿಸಿದರು. ಕು. ಗಂಗಾ, ಶ್ರೀಮತಿ ನಾಗವೇಣಿ, ಶ್ರೀಮತಿ ಭಾಗ್ಯಲಕ್ಷ್ಮಿ ಕ್ರೀಡೆಗಳ ಜವಾಬ್ದಾರಿ ವಹಿಸಿದ್ದರು. ಕು. ಲಾವಣ್ಯ ವಂದಿಸಿದರು.
ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಕ್ರೀಡಾಕೂಟ
![23 little champs news 08.01.2024 ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಕ್ರೀಡಾಕೂಟ](https://janathavani.com/wp-content/uploads/2024/01/23-little-champs-news-08.01.2024-860x492.jpg)