ಜಿಲ್ಲೆಯ ವಿಕಲ ಚೇತನರಿಗೆ 5 ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ

ದಾವಣಗೆರೆ. ಜ. 7 – ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ವಿಕಲ ಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ 5 ಫಲಾನುಭವಿ ಆಧಾರಿತ ಯೋಜನೆಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸೇವಾಸಿಂಧು, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿಟಿಜೆನ್ಸ್ (Sevasindhu: URL:https://sevasindhu.karnataka.gov.in/) ಫೊರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇದೇ ದಿನಾಂಕ 30 ಕೊನೆಯ ದಿನವಾಗಿರುತ್ತದೆ.  ಈ ಯೋಜನೆಗಳನ್ನು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಮೂಲಕ ವಿಕಲ-ಚೇತನರಿಂದ ಅರ್ಜಿ ಸಲ್ಲಿಸಲು ವಿ.ಆರ್.ಡಬ್ಲ್ಯೂಗಳಿಗೆ ನಗರ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಯು.ಆರ್. ಡಬ್ಲ್ಯೂಗಳಿಗೆ ಅರ್ಜಿ ಸಲ್ಲಿಸಬಹುದು.

ಎಸ್ಸೆಸ್ಸೆಲ್ಸಿಯಲ್ಲಿ ಮತ್ತು ನಂತರ ಓದುತ್ತಿರುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಯೋಜನೆ, ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮೋಟಾರೀಕೃತ ದ್ವಿಚಕ್ರ ವಾಹನ ಯೋಜನೆ, ದೃಷ್ಟಿ ದೋಷವುಳ್ಳ ವ್ಯಕ್ತಿಗಳಿಗಾಗಿ ಬ್ರೈಲ್ ಕಿಟ್, ಶ್ರವಣ ದೋಷವುಳ್ಳ ಸ್ವಯಂ ಉದ್ಯೋ ಗಿಗಳಿಗೆ ಹೊಲಿಗೆ ಯಂತ್ರಗಳು, ಸಾಧನಗಳು ಮತ್ತು ಉಪಕರಣಗಳನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ವಿಕಲ ಚೇತನರ ಸಹಾಯವಾಣಿ ಕೇಂದ್ರ 08192-263939 ಹಾ ಗೂ ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯಾ ಲಯ, ಕೆ.ಎಂ. ಶೈಲಜಾ (98863 66809), ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕೆ. ಸುಬ್ರಮಣ್ಯಂ (9945738141), ಜಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಎಂ.ಕೆ. ಶಿವನಗೌಡ (99021 05734), ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಟಿ. ಶಶಿಕಲಾ (99454 58058), ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಬಿ. ಚನ್ನಪ್ಪ (95908 29024) ಸಂಪರ್ಕಿಸಬಹುದು.

error: Content is protected !!