ಫೆ. 19 ಕ್ಕೆ ಸರಳವಾಗಿ ಗ್ರಾಮ ದೇವತೆ ಹಬ್ಬ ಆಚರಿಸಲು ತೀರ್ಮಾನ

ಫೆ. 19 ಕ್ಕೆ ಸರಳವಾಗಿ ಗ್ರಾಮ ದೇವತೆ ಹಬ್ಬ ಆಚರಿಸಲು ತೀರ್ಮಾನ

ಮಲೇಬೆನ್ನೂರು,ಜ. 7- ಪಟ್ಟಣದ ಗ್ರಾಮ ದೇವತೆ ಶ್ರೀ ಏಕನಾಥೇಶ್ವರಿ, ಶ್ರೀ ಕೋಡಿ ಮಾರೇಶ್ವರಿ ಮತ್ತು ಶ್ರೀ ದುರ್ಗಾಂಬಿಕಾ ದೇವಿಯರ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು.

ಏಕನಾಥೇಶ್ವರಿ ದೇವಸ್ಥಾನದಲ್ಲಿ ಪೂಜಾರ ಬಸಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಕರೆದಿದ್ದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಬರುವ ಫೆಬ್ರವರಿ 19 ರಂದು ಅಮ್ಮನವರ ಜಾತ್ರೆ ಜರುಗಲಿದ್ದು, ಈ ವರ್ಷ ಮಳೆ ಕೈಕೊಟ್ಟಿರುವ ಕಾರಣ ಉತ್ಸವವನ್ನು ಸರಳವಾಗಿ ಆಚರಿಸಲು ಸಭೆಯಲ್ಲಿದ್ದವರು ಸಹಮತ ವ್ಯಕ್ತಪಡಿಸಿದರು.

ಮುಖಂಡರಾದ ಭರ್ಮಳ್ಳಿ ಭರಮಗೌಡ, ಕಣ್ಣಾಳ್ ಪರಶುರಾಮಪ್ಪ, ಕೆ.ಜಿ. ಕೊಟ್ರೇಶಪ್ಪ, ನಿಂಗಪ್ಪ, ಸುರೇಶ ಶಾಸ್ತ್ರಿ, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ಧೇಶ್, ಶ್ಯಾಂ ಸುಂದರ್ ಜೋಯಿಷ್, ಸುಬ್ಬಿ ರಾಜಪ್ಪ, ವಸಂತ್, ಕರಿಯಪ್ಪ, ಕೆ.ಜಿ. ಪರಮೇಶ್ವರಪ್ಪ, ಕೆ.ಪಿ. ಗಂಗಾಧರ್, ಕೆ.ಜಿ. ಪರಮೇಶ್ವರಪ್ಪ, ಹಾಲೇಶ್, ಚನ್ನಪ್ಪ, ಪುಟ್ಟಪ್ಪ ಸೇರಿದಂತೆ ಇತರರು ಸಭೆಯಲ್ಲಿದ್ದರು.

error: Content is protected !!