ಮಗುವಿನ ಅಂಕಗಳ ಮೇಲೆ ಅವರ ಸಾಮರ್ಥ್ಯವನ್ನು ಅಳೆಯಬೇಡಿ

ಮಗುವಿನ ಅಂಕಗಳ ಮೇಲೆ ಅವರ ಸಾಮರ್ಥ್ಯವನ್ನು ಅಳೆಯಬೇಡಿ

ವಿಶ್ವಚೇತನ ಶಾಲೆಯ ಕಾರ್ಯಕ್ರಮದಲ್ಲಿ ಡಾ. ಹೆಚ್.ವಿ. ವಾಮದೇವಪ್ಪ

ದಾವಣಗೆರೆ, ಜ. 7 – ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿ ಯುತ ಪ್ರೌಢಶಾಲೆಯಲ್ಲಿ 36ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ  ನಿವೃತ್ತ ಪ್ರಾಂಶುಪಾಲ ಡಾ. ಹೆಚ್.ವಿ. ವಾಮದೇವಪ್ಪ ಮಾತನಾಡಿ, ಯಾರಲ್ಲಿ ಕಠಿಣ ಪರಿಶ್ರಮವಿರುವುದೋ ಅವರಿಂದ ಮಾತ್ರ ಸಾಧನೆಗೈಯ್ಯಲು ಸಾಧ್ಯ ಎಂದು ಪ್ರತಿಪಾದಿಸಿದರು. 

ಮಗುವಿನ ಅಂಕಗಳ ಮೇಲೆ ಅವರ ಸಾಮರ್ಥ್ಯವನ್ನು ಅಳೆಯಬೇಡಿ. ಅವರಲ್ಲಿ ಮೌಲ್ಯಗಳನ್ನು ಬೆಳೆಸಿ, ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಪರಿಪೂರ್ಣ ವಾಗಿ ಓದಿ, ಪ್ರಶ್ನಿಸುವ ಕೌಶಲ್ಯ ಬೆಳೆಸಿಕೊಳ್ಳಿ, ಆಗ ಜ್ಞಾಪಕ ಶಕ್ತಿ ಹೆಚ್ಚಾಗುವುದು. ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಅವರು ಕರೆ ನೀಡಿದರು. 

ಶಾಲಾ ಶಿಕ್ಷಕರಿಂದ ತಿರಸ್ಕರಿಸಲ್ಪಟ್ಟ ಥಾಮಸ್ ಆಲ್ವ ಎಡಿಸನ್‌ನನ್ನು ಶ್ರೇಷ್ಠ ವಿಜ್ಞಾನಿಯನ್ನಾಗಿ ಮಾಡಿದ ಸಾಧನೆ ಅವರ ತಾಯಿಯವರದ್ದು. ಅಂತೆಯೇ ನಮ್ಮ ಮಕ್ಕಳನ್ನು ಪ್ರೋತ್ಸಾಹಿಸೋಣ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ, ಅವರ ಸಾಧನೆಗೆ ಪ್ರೋತ್ಸಾಹ ನೀಡಿ ಎಂದು ಕಿವಿಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ಜಿ.  ಮಾತನಾಡಿ,    ಮಕ್ಕಳೊಂದಿಗೆ ಪ್ರತಿದಿನ ಒಂದು ಘಳಿಗೆಯಾದರೂ ಕಳೆಯಬೇಕು ಎಂದು ಪೋಷಕರಿಗೆ ಕಿವಿಮಾತುಗಳನ್ನು ನೀಡಿದರು. 

ಶಾಲೆಯ  ನಿರ್ದೇಶಕ ರಾಘವೇಂದ್ರ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸತ್ಯ, ಧರ್ಮ, ಪ್ರಾಮಾಣಿಕತೆ ಮಕ್ಕಳಲ್ಲಿ ಇರಬೇಕು ಎಂದು ಹೇಳಿದರು. 

ಪ್ರಾಂಶುಪಾಲರಾದ ಸತ್ಯನಾರಾಯಣ ರೆಡ್ಡಿ ಅವರು ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು.  ಕಾರ್ಯಕ್ರಮದಲ್ಲಿ 2022 – 23ರ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿ ಗಳಾದ  ಸಿ.ಬಿ.ಎಸ್.ಇ. ಪಠ್ಯಕ್ರಮದ ಕು.  ಮಹ ಮ್ಮದ್ ನವಾಜ್ ಜಾಯಿದ್, ರಾಜ್ಯ ಪಠ್ಯಕ್ರಮದ ಕು. ತಿರುಮಲ ಕೆ.,  ಕು. ವಿಭ ಅವರಿಗೆ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ  ಸನ್ಮಾನಿಸಲಾಯಿತು.

ನೂರಕ್ಕೆ ನೂರು ಅಂಕ ಗಳಿಸಲು ಮಾರ್ಗ ದರ್ಶನ ನೀಡಿದ ಶಿಕ್ಷಕ ನಾಗರಾಜ ಬಿ. ಕನ್ನಡ ಭಾಷೆ, ದೇವರಾಜ್ ಇಂಗ್ಲಿಷ್ ಭಾಷೆ, ಯುವರಾಜ್  ಸಮಾಜ ವಿಜ್ಞಾನ ಹಾಗೂ ಡಿ ದರ್ಜೆಯ ಸಹಾಯಕ ರಮೇಶ್ ಅವರಿಗೆ ಶಾಲಾ ವತಿಯಿಂದ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

2023-24ನೇ ಶೈಕ್ಷಣಿಕ ವರ್ಷದ  ಅತ್ಯುತ್ತಮ ವಿದ್ಯಾರ್ಥಿಯಾಗಿ ಆಯ್ಕೆಯಾದ ಸಿ.ಬಿ.ಎಸ್.ಇ. ಪಠ್ಯಕ್ರಮದ 10ನೇ ತರಗತಿಯ ಕು. ಚೈತ್ರಿಕ ಚೌಧರಿ, ರಾಜ್ಯ ಪಠ್ಯಕ್ರಮದ ಕು. ಯಶ್ವಂತ್ ಎಂ. ಹಾಗೂ 5ನೇ ತರಗತಿ ಕು. ಸಾಯಿ ವೈಷ್ಣವಿ, 6ನೇ ತರಗತಿಯ ಆರ್ ಮೋಹನ, ಕಾರ್ತಿಕ,  ಪಾವನಿ ವಿ. ಎನ್., 7ನೇ ತರಗತಿಯ ನಿಧಿ ಮಾಗೋಡ್, 8ನೇ ತರಗತಿಯ ಸುಹಾಸ್ ಜಿ. ಎಮ್, 9ನೇ ತರಗತಿಯ ರುಚಿತಾ ರೆಡ್ಡಿ, 10ನೇ ತರಗತಿಯ ಚೈತ್ರಿಕಾ ಚೌಧರಿ, ರಾಜ್ಯ ಪಠ್ಯ ಕ್ರಮದಿಂದ 8ನೇ ತರಗತಿಯ ರಮ್ಯಾ ಜೆ, 9ನೇ ತರಗತಿ ಸುಜನ್ ದೊಡ್ಡನಾಯಕ್, 10 ನೇ ತರಗತಿ ಗೌರಿಶ್ರೀ  ಈ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ವಿ.ವಿ. ಕಿರಣ್, ಪ್ರಾಂಶುಪಾಲ ವಿನೋದ್, ಸುಬ್ಬರಾವ್,  ಮುಖ್ಯೋಪಾಧ್ಯಾಯ ಬಿ.ಎಂ. ಬಸವರಾಜಯ್ಯ, ಉಪ ಪ್ರಾಂಶುಪಾಲ ಯುವರಾಜ್.ಕೆ ಹಾಗೂ  ವಿದ್ಯಾರ್ಥಿ ನಿಲಯದ ಮುಖ್ಯಸ್ಥ ರೇವಣಸಿದ್ದಪ್ಪ ಅವರು ಉಪಸ್ಥಿತರಿದ್ದರು.

ಒಲಂಪಿಯಾಡ್ ಮುಖ್ಯಸ್ಥ  ಶ್ರೀನಿವಾಸಮೂರ್ತಿ  ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ವಿನೋದ ಅವರು ವಂದಿಸಿದರು. ಕನ್ನಡ ಭಾಷಾ ಮುಖ್ಯಸ್ಥ ನಾಗರಾಜ್ ಬಿ. ಅವರು ಕಾರ್ಯಕ್ರಮ ನಿರೂಪಿಸಿದರು.

error: Content is protected !!