ದಾವಣಗೆರೆ, ಜ.7- ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಮಹಾತ್ಮ ಗಾಂಧಿ ಸ್ಮಾರಕ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ನಗರದ ವೈ.ಆರ್.ಪಿ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲ್ನ 9 ವಿದ್ಯಾರ್ಥಿಗಳು ಕತಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ 6 ಸ್ವರ್ಣ, 2 ರಜತ ಹಾಗೂ 9 ಕಂಚಿನ ಪದಕಗಳನ್ನು ಪಡೆದಿದ್ದಾರೆ ಎಂದು ತರಬೇತುದಾರ ಸೆನ್ಸೈ ಎಸ್. ಯುವರಾಜ್ ತಿಳಿಸಿದ್ದಾರೆ.
ವೈ.ಆರ್.ಪಿ ಕರಾಟೆ ಶಾಲೆಗೆ 6 ಸ್ವರ್ಣ
![22 yrp karate news 08.01.2024 ವೈ.ಆರ್.ಪಿ ಕರಾಟೆ ಶಾಲೆಗೆ 6 ಸ್ವರ್ಣ](https://janathavani.com/wp-content/uploads/2024/01/22-yrp-karate-news-08.01.2024-860x521.jpg)