ಶೋಷಿತ ಸಮುದಾಯಗಳಲ್ಲಿ ಒಗ್ಗಟ್ಟು ಅವಶ್ಯ: ಕೆ.ಎಂ. ರಾಮಚಂದ್ರಪ್ಪ

ಶೋಷಿತ ಸಮುದಾಯಗಳಲ್ಲಿ ಒಗ್ಗಟ್ಟು ಅವಶ್ಯ: ಕೆ.ಎಂ. ರಾಮಚಂದ್ರಪ್ಪ

ದಾವಣಗೆರೆ, ಜ. 5- ದಲಿತ, ಹಿಂದು ಳಿದ, ಶೋಷಿತ ಸಮುದಾಯಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತಿದ್ದು, ಎಂತಹದ್ದೇ ಸನ್ನಿವೇಶ ಎದುರಾದರೂ  ಶೋಷಿತ ಸಮುದಾಯಗಳಲ್ಲಿ ಒಗ್ಗಟ್ಟು ಅವಶ್ಯ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ  ಜ. 28 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತ ಸಮಾಜಗಳ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದುಳಿದ ವರ್ಗದವರಾದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಸಹ ಪಟ್ಟಭದ್ರರು ಶೋಷಿತ ವರ್ಗದ ಪರ ಕೆಲಸ ಮಾಡಲು ಬಿಡದಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈ ಬಲಪಡಿಸುವುದು ಮತ್ತು ಜಾತಿಗಣತಿ ಜಾರಿಗೆ ಆಗ್ರಹಿಸುವುದು ಶೋಷಿತ ಸಮಾಜಗಳ ಸಮಾವೇಶದ ಉದ್ದೇಶ ಎಂದು ಹೇಳಿದರು.

ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇ ಕೆಂದು ಚಿತ್ರದುರ್ಗದಲ್ಲಿ ನಡೆಯುವ ಸಮಾ ವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯ ಮಾಡಬೇಕಾಗಿದೆ. ಹೀಗಾಗಿ ದಾವಣಗೆರೆ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಹೊಸಪೇಟೆ ಸೇರಿದಂತೆ ಚಿತ್ರದುರ್ಗ ಸುತ್ತಮುತ್ತಲಿನ ಶೋಷಿತ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುಂತೆ ಮನವಿ ಮಾಡಿದರು.

ಪ್ರತಿ ಜಿಲ್ಲೆಯಿಂದ ಒಂದು ಲಕ್ಷ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಸಮಾವೇಶದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವುದಾಗಿ ಹೇಳಿದ ರಾಮಚಂದ್ರಪ್ಪ ಅವರು, ಶೋಷಿತ ಸಮುದಾಯಗಳ ಮುಖಂಡರು ಸಹ ಜನರನ್ನು ಅಧಿಕ ಸಂಖ್ಯೆಯಲ್ಲಿ ಕರೆತರುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಕೇವಲ ಶೇ. 10 ರಷ್ಟು ಜನಸಂಖ್ಯೆ ಇರುವವರು ನಮ್ಮನ್ನು ಆಳುತ್ತಿದ್ದಾರೆ. ಇವತ್ತು ಶೋಷಿತರ ಧ್ವನಿಯಾಗಿ ಉಳಿದಿರುವವರು ಸಿದ್ಧರಾಮಯ್ಯ ಒಬ್ಬರೇ. ಆದ್ದರಿಂದ ಅವರ ಕೈ ಬಲಪಡಿಸುವ ಅಗತ್ಯವಿದೆ ಎಂದರು.

ದಾವಣಗೆರೆ ಜಿಲ್ಲೆಯಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಶೋಷಿತ ಜನರನ್ನು ಸಮಾವೇಶಕ್ಕೆ ಕರೆದೊಯ್ಯುವ ಕೆಲಸವನ್ನು ಮಾಡುವುದಾಗಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ರಾಜ್ಯ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಡಿ. ಬಸವರಾಜ್, ಮಾಜಿ ಶಾಸಕ ಎಸ್. ರಾಮಪ್ಪ, ವಕೀಲ ಜಯದೇವನಾಯ್ಕ,, ಕಾಂಗ್ರೆಸ್ ಮುಖಂಡರಾದ ಸುಭಾಶ್ಚಂದ್ರ, ವೀರಣ್ಣ, ಹರಪನಹಳ್ಳಿ ಮಂಜುನಾಥ್, ಎನ್.ಜೆ. ನಿಂಗಪ್ಪ, ಶಿವಕುಮಾರ್ ಒಡೆಯರ್, ವಿವಿಧ ಸಮಾಜಗಳ ಮುಖಂಡರಾದ ಪರಶು ರಾಮಪ್ಪ, ಮುದಹದಡಿ ದಿಳ್ಳೆಪ್ಪ, ಹೊನ್ನಾಳಿ ಸಿದ್ಧಪ್ಪ, ಉಮಾಪತಿ, ಅನೀಸ್ ಪಾಷಾ, ಎ.ಬಿ.ಹನುಮಂತಪ್ಪ,  ಗುಬ್ಬಿ ಬಸವರಾಜ್, ಎಂ.ಬಿ. ಅಬಿದಾಲಿ, ಬಾಡ ರವಿ, ಎಸ್.ಎಸ್. ಗಿರೀಶ್ ಮತ್ತಿತರರು ಭಾಗವಹಿಸಿದ್ದರು.  

error: Content is protected !!