ದಾವಣಗೆರೆ: ಸಂಗೀತ ಸಿರಿ ತನ್ನ 26ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿನ ಇಂದು ಮತ್ತು ನಾಳೆ ಸಂಗೀತ ರಸ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇಲ್ಲಿನ ಹೋಟೆಲ್ ಶಾಂತಿ ಪಾರ್ಕ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿರ್ಸಿಯ ಗಾಯಕಿ ವೈಶಾಲಿ ಮಂಜ್ರೇಕರ್, ಬಿ.ಎ೦. ರಿಯಾಜ್ ಅಹಮ್ಮದ್ ಸೇರಿದಂತೆ ಡಾ.ಅನೀಸ್, ಡಾ. ರಾಘವನ್, ಕು ಶಿಲ್ಪಾ, ಸೇರಿದಂತೆ ಸ್ಥಳೀಯ ಕಲಾವಿದರು ಹಾಡಿ ರಂಜಿಸಲಿದ್ದಾರೆ. ಸಂಗೀತ ಸಿರಿ ಸಂಗೀತ ನಿರ್ಮಾಪಕರಾದ ಶ್ರೀಮತಿ ಸಕೀನಾ ಅವರು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಎಂದು ತಿಳಿಸಿದ್ದಾರೆ.