ಹದಡಿಯಲ್ಲಿ ನಾಳೆಯಿಂದ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕ

ದಾವಣಗೆರೆ, ಜ.5- ತಾಲ್ಲೂಕಿನ ಹದಡಿ ಗ್ರಾಮದಲ್ಲಿ ದಿನಾಂಕ 7 ರಿಂದ 9 ರವರೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವ ಮತ್ತು ಮುಳ್ಳು ಗದ್ದಿಗೆ ಜಾತ್ರಾ ಮಹೋತ್ಸವ ಹಾಗೂ ಕೆಂಡದಾರ್ಚನೆ, ಜಾತ್ರಾ ಮಹೋತ್ಸವ ಹಾಗೂ ಮಹಾಸ್ವಾಮಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 7 ರ ಭಾನುವಾರ ರಾತ್ರಿ 8.30 ಕ್ಕೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಕದಲಿ ಕಾರ್ತಿಕೋತ್ಸವ, ದೀಪಾರಾಧನೆ, ಪವಾಡ ಪದ, ವೀರಗಾರರ ನೃತ್ಯ ಜರಗುವುದು.

ದಿನಾಂಕ 8 ರ ಸೋಮವಾರ ಬೆಳಿಗ್ಗೆ ಶಸ್ತ್ರ ಪವಾಡಗಳು, ಶ್ರೀ ಬೀರಲಿಂಗೇಶ್ವರ ದೇವರಿಗೆ ಎಡೆ ಸಮರ್ಪಣೆ, ಮಹಾಮಂಗಳಾರತಿ, ಜವಳ, ದೀಡು ನಮಸ್ಕಾರ, ಉರುಳುಸೇವೆ ಜರುಗುವವು.

ದಿನಾಂಕ 9 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕೆಂಡದ ಗದ್ದುಗೆಗೆ ಜ್ಯೋತಿ ಹಚ್ಚುವುದು, ಶ್ರೀ ಬೀರಲಿಂಗೇಶ್ವರ ದೇವರ ಭಾಜಾ ಭಜಂತ್ರಿ ಮೆರವಣಿಗೆ ನಡೆಯುವುದು. ಮಧ್ಯಾಹ್ನ 1 ಗಂಟೆಗೆ ಹೊಳೆ ಪೂಜೆ, 2 ಗಂಟೆಗೆ ಶ್ರೀ ಬೀರಲಿಂಗೇಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ದಂಡಿ ದುರುಗಮ್ಮ ದೇವಿ, ಶ್ರೀ ಮಸಿಯಾಂಬಿಕಾ ದೇವಿ, ಶ್ರೀ ಹೊರಟ್ಟಿ ದುರ್ಗಮ್ಮ ದೇವರುಗಳ ಹೊಳೆ ಪೂಜೆ, ಹಲಗೆ, ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಯುವುದು. 3 ಗಂಟೆಗೆ ದೇವರುಗಳಿಗೆ ಎಡೆ ಸಮರ್ಪಣೆ ಮಾಡಲಾಗುವುದು.

error: Content is protected !!