ಸಿರಿಗೆರೆ ಬೃಹನ್ಮಠದ ಕಾರ್ಯಕ್ರಮದಲ್ಲಿ ವಿಮರ್ಷಕ ಹೆಚ್.ಎಸ್.ಸತ್ಯನಾರಾಯಣ
ಸಿರಿಗೆರೆ, ಡಿ.28- ದೀರ್ಘವಾದ ಕಥೆ, ಸಣ್ಣಕಥೆ, ಲಲಿತ ಪ್ರಬಂಧ, ಕಾದಂಬರಿ ಗಳು ಹೇಗೆ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಾಗಿ ವೆಯೋ ಹಾಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ವಿಚಾರಗೋಷ್ಠಿ ಪಠ್ಯವಾಗಿರದೇ ಮಹಾನ್ ಲೇಖಕರ ಕೃತಿಯನ್ನು ಅರ್ಥೈಸಿಕೊಳ್ಳುವ ಕಾರ್ಯಕ್ರಮವಾಗಿದೆ ಎಂದು ವಿಮರ್ಶಕ, ಅಂಕಣಕಾರ ಮತ್ತು ಕನ್ನಡ ಪ್ರಾಧ್ಯಾಪಕ ಹೆಚ್.ಎಸ್.ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಇಲ್ಲಿನ ಗುರುಶಾಂತೇಶ್ವರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ಭಾಷಾ ವಿಷಯದ ಪಠ್ಯವಾಗಿರುವ ಕೃಷ್ಣೇಗೌಡರ ಆನೆ ನೀಳ್ಗತೆಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಥೆ ತೇಜಸ್ವಿಯವರ ಆಲೋಚನೆ, ವಿಚಾರದೃಷ್ಟಿ, ಗ್ರಾಮ ಭಾರತದ ಚಿತ್ರಣ, ಸಾಮಾನ್ಯ ಜನರ ಮಾನವೀ ಯತೆ, ಸುತ್ತಮುತ್ತಲಿನ ವಾತಾ ವರಣ ಅರ್ಥೈಸಿಕೊಳ್ಳುವ ಹಾಗೆ ಜೀವತುಂಬಿದೆ. ಇಲ್ಲಿ ಸನ್ನಿವೇಶ, ದೃಶ್ಯ, ಸಂಭಾಷಣೆ, ವಿಚಾರ ಪ್ರಚೋದನೆಗಳು, ವಿಮರ್ಶೆ ಹಾಗೂ ಚಿಂತನೆಗೆ ಇಂತಹ ವೇದಿಕೆಗಳು ಅವಶ್ಯಕವಾಗಿವೆ. ಅರಣ್ಯ ಸಂಸ್ಕೃತಿ, ನಗರ ಸಂಸ್ಕೃತಿಯನ್ನು ಬಿಂಬಿಸಿದೆ.
ಸಮಾಜದಲ್ಲಿನ ಕೆಳವರ್ಗದವರ ಕಾರ್ಯಗಳನ್ನು ಎತ್ತಿಹಿಡಿದಿದೆ. ವೈರುಧ್ಯ ಹಾಗೂ ದುರಂತಗಳಿಗೆ ಇಲ್ಲಿನ ಪ್ರಾಣಿ (ಆನೆ) ಯೇ ಅಪರಾಧಿಯಾಗಿ ಕಾಣುತ್ತದೆ ಎಂಬುದು ನೋಡುಗರ, ಮಾನವೀಯರ ಮನುಷ್ಯರ ಕಥನ ಇಲ್ಲಿದೆ. ಪ್ರಸ್ತುತ ವಿವಿಧ ಇಲಾಖೆಗಳಲ್ಲಿರುವ ಅವ್ಯವಸ್ಥೆ, ಭ್ರಷ್ಟಾಚಾರ ವ್ಯವಸ್ಥೆ, ಸಂಕುಚಿತ ಮನುಷ್ಯನ ಮನಸ್ಥಿಯನ್ನು ಹೊಂದಿದ್ದು ಮತ್ತೊಬ್ಬರನ್ನು ಆರೋಪಿಸುವಂತದ್ದು ಕಥೆಯಲ್ಲಿದೆ ಎಂದರು.
ಬೆಂಗಳೂರಿನ ರಂಗಕರ್ಮಿ, ಪತ್ರ ಕರ್ತ ಶಶಿಕಾಂತ ಯಡಹಳ್ಳಿ ಮಾತನಾಡಿ, ಪೂರ್ಣಚಂದ್ರ ತೇಜಸ್ವಿಯವರು ಸರಳ ಭಾಷೆ, ಹಾಸ್ಯಮಯವಾಗಿ ಕಥೆಯನ್ನು ಮಾನವ ಧರ್ಮ, ವಿಶ್ವ ಧರ್ಮದ ದೃಷ್ಟಿಕೋನದಲ್ಲಿ ಈ ಕಥೆಯನ್ನು ತಂದಿದ್ದಾರೆ. ಕೆಳವರ್ಗದ ನೌಕರರ ಬಗೆಗೆ ವ್ಯವಸ್ಥೆಯಲ್ಲಿನ ನ್ಯೂನತೆ ಹಾಗೂ ದೌರ್ಬಲ್ಯಗಳನ್ನು ವಿಶ್ಲೇಷಿಸಿದೆ. ಕೇಳಿದ, ನೋಡಿದ, ಸಂಗತಿಯನ್ನು, ಇತ್ತೀಚಿನ ಘಟನೆಗಳನ್ನು ಆಧರಿಸಿ ಕಥೆಗಾರ ಇಲ್ಲಿ ವಿವರಿಸಿದ್ದರಿಂದ ಶ್ರೇಷ್ಠ ಕಥೆಗೆ ಭಾರತೀಯ ಕಥಾ ಪುರಸ್ಕಾರ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವನಗೌಡ ಕೆ. ಸುರಕೋಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯ ಪ್ರವೀಣ್ ಕುಮಾರ್ ಜಿ.ಸಿ, ಪ್ರಾಚಾರ್ಯ ನರೇಂದ್ರ ಪಾಟೀಲ್ ಮತ್ತು ಕಾಲೇಜಿನ ಉಪನ್ಯಾಸಕರು ಹಾಗೂ ಬಿ.ಎಲ್.ಆರ್ ಪದವಿಪೂರ್ವ ಕಾಲೇಜು, ಎಂ.ಬಿ.ಆರ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೃಷ್ಣೇಗೌಡರ ಆನೆ ಕಥೆಯ ವಿಷಯವಾಗಿ ಸಂವಾದ ನಡೆಸಿದರು.
ಕನ್ನಡ ಉಪನ್ಯಾಸಕರಾದ ಇ.ದೇವರಾಜು, ನರೇಶ್ ಕುಮಾರ್, ಸುಜಾತ, ರಮ್ಯ ಇದ್ದರು. ನಯನ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಸುಜಾತ ಸ್ವಾಗತಿಸಿದರು, ಉಪನ್ಯಾಸಕಿ ರಮ್ಯ ನಿರೂಪಿಸಿದರು.