ಜಗಳೂರು : ಕೃಷಿ ಹೊಂಡ ನಿರ್ಮಿಸಲು ಅರ್ಜಿ ಆಹ್ವಾನ

ಜಗಳೂರು, ಡಿ. 28 – ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಹೊಂಡಗಳಿಗೆ ರೈತರು ಅರ್ಜಿ ಸಲ್ಲಿಸಲು 2024 ಜನವರಿ 6 ಕೊನೆಯ ದಿನಾಂಕವಾಗಿದ್ದು, ಅಗತ್ಯ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬೇಕು.
ಈ ಯೋಜನೆ ಪ್ಯಾಕೇಜ್ ರೂಪದಲ್ಲಿದ್ದು, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ (ತಾಡಪಲ್), ಡೀಸೆಲ್ ಪಂಪ್ ಸೆಟ್, ಲಘ ನೀರಾವರಿ ಘಟಕ, ತಂತಿ ಬೇಲಿ ಒಳಗೊಂಡಿರುತ್ತದೆ. ಆಯ್ಕೆಯಾದ ಘಟಕಗಳು ಅನುಷ್ಠಾನಗೊಂಡ ನಂತರ ಸಹಾಯಧನ ಪಾವತಿಸಲಾಗುವುದು. ಫಲಾನುಭವಿಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗುವುದು.
ಕ್ಷೇತ್ರ ಬದು, ಕೃಷಿ ಹೊಂಡ, ತಾಡಪಲ್‌ಗಳಿಗೆ ಸಾಮಾನ್ಯ ವರ್ಗದವರಿಗೆ ಶೇ.80 ಎಸ್.ಸಿ.ಎಸ್.ಟಿ ವರ್ಗದವರಿಗೆ ಶೇ.90, ತಂತಿ ಬೇಲಿಗೆ ಸಾಮಾನ್ಯ ವರ್ಗಕ್ಕೆ ಶೇ.40, ಎಸ್.ಸಿ.ಎಸ್.ಟಿ. ಗೆ ಶೇ.50, ಡೀಸೆಲ್ ಪಂಪ್ ಸೆಟ್‌ಗೆ ಸಾಮಾನ್ಯ ವರ್ಗಕ್ಕೆ ಶೇ.50, ಎಸ್.ಸಿ.ಎಸ್.ಟಿ. ಗೆ ಶೇ.90 ರಷ್ಟು ಸಹಾಯಧನ ಒದಗಿಸಲಾಗುವುದು, ಅರ್ಜಿ ಸಲ್ಲಿಸುವಾಗ ಅನುಷ್ಠಾನ ಇಲಾಖೆಗಳಿಂದ ಸಹಾಯಧನ ಪಡೆದಿಲ್ಲ ಎಂಬ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

error: Content is protected !!