ಕದಳಿ ಮಹಿಳಾ ವೇದಿಕೆಯ ಸರ್ವ ಸದಸ್ಯರ ಸಾಮಾನ್ಯ ಸಭೆ

ಕದಳಿ ಮಹಿಳಾ ವೇದಿಕೆಯ ಸರ್ವ ಸದಸ್ಯರ ಸಾಮಾನ್ಯ ಸಭೆ

ದಾವಣಗೆರೆ, ಡಿ. 28 – ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ಕದಳಿ ಮಹಿಳಾ ವೇದಿಕೆಯು 149ನೇ ಕಮ್ಮಟದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ, ದತ್ತಿ ಉಪನ್ಯಾಸ, ಶರಣ ಒಕ್ಕಲಿಗ ಮುದ್ದಣ್ಣ ಮತ್ತು ಶರಣ ಮಾದರ ಚೆನ್ನಯ್ಯ ಸ್ಮರಣೆ, ಗೌರವಾರ್ಪಣೆ ಹಾಗೂ ಸದಸ್ಯರಿಗೆ ಆಟಗಳನ್ನು ಏರ್ಪಡಿಸಲಾಗಿತ್ತು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವ ತಮ್ಮ ಸಮುದಾಯ ಭವನದ ಆವರಣದಲ್ಲಿ ತರಳಬಾಳು ಸಭಾಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಕದಳಿ ಮಹಿಳಾ ವೇದಿಕೆಯ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ಉಮಾ ವೀರಭದ್ರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.
ಸಹಜ ಕೃಷಿಕ ರಾಘವ ಇವರಿಂದ ನಿಜವಾದ ಆಹಾರ ಪದ್ಧತಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಸಲಾಯಿತು. ಅವರು ಇಂದಿನ ಆಹಾರ ಪದ್ದತಿಯಲ್ಲಿ ಅಡಕವಾಗಿ ರುವ ರಾಸಾ ಯನಿಕವನ್ನು ಮುಕ್ತಗೊಳಿಸಿ, ನಿಜವಾದ ಆಹಾರ ವನ್ನು ಉಪಯೋಗಿಸುವ ಬಗ್ಗೆ ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ವಿನೋದ ಅಜಗಣ್ಣನವರು ಸ್ವಾಗತಿಸಿದರು. ಜಿಲ್ಲಾ ಖಜಾಂಚಿಯಾದ ಶ್ರೀಮತಿ ರತ್ನ ರೆಡ್ಡಿ ಅವರು ಆಯವ್ಯವನ್ನು ಮಂಡಿಸಿದರು. ತಾಲ್ಲೂಕು ಕಾರ್ಯದರ್ಶಿ ಶ್ರೀಮತಿ ವಸಂತ ಕೆ.ಆರ್‌. ಅವರು ದತ್ತಿ, ದಾನಿಗಳು ಮತ್ತು ಉಪನ್ಯಾಸಕರನ್ನು ಪರಿಚಯಿಸಿದರು
ದಿ. ಪಟೇಲ್ ಜಿ ಜಯಪ್ಪ ಮತ್ತು ಶ್ರೀಮತಿ ಸುಂದರಮ್ಮ ಜಯಪ್ಪ ಇವರ ದತ್ತಿ ಕಾರ್ಯಕ್ರಮದಲ್ಲಿ ಡಾ|| ಮಂಜುನಾಥ ಗೌಡ ಮತ್ತು ಶ್ರೀಮತಿ ಮಂಜುಳಾರವರು ದತ್ತಿ ದಾನಿಗಳಾಗಿದ್ದರು.
ಶ್ರೀಮತಿ ಸುಧಾ ದಿಬ್ದಳ್ಳಿ, ಶ್ರೀಮತಿ ಸುವರ್ಣಮ್ಮ ದೊಗ್ಗಳ್ಳಿ, ಶ್ರೀಮತಿ ಶಾಂತವೀರಮ್ಮ ಇವರಿಗೆ ವೇದಿಕೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಇವರುಗಳ ಪರಿಚಯವನ್ನು ಶ್ರೀಮತಿ ಮಮತಾ ನಾಗರಾಜ್ ಮಾಡಿದರು.
ಕದಳಿ ಮಹಿಳಾ ವೇದಿಕೆಯ ಗೌರವ ಸಲಹೆಗಾರರಾದ ಶ್ರೀಮತಿ ಯಶಾ ದಿನೇಶ್, ಕದಳಿ ಮಹಿಳಾ ವೇದಿಕೆಯ ರಾಜ್ಯ ಸಮಿತಿಯ ಉಪ ಸಂಚಾಲಕರಾದ ಶ್ರೀಮತಿ ಪ್ರಮೀಳಾ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ವಸ್ತ್ರದ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಲೋಕೇಶ್ ಅವರು ಗೌರವ ಉಪಸ್ಥಿತರಿದ್ದರು.
ಶ್ರೀಮತಿ ಸೌಮ್ಯ ಸತೀಶ್ ಅವರು ವಂದನಾರ್ಪಣೆ ಮಾಡಿದರು. ಶ್ರೀಮತಿ ವಾಣಿ ರಾಜ್ ನಿರೂಪಿಸಿದರು.

error: Content is protected !!