ದಾವಣಗೆರೆ ತಾಲ್ಲೂಕು ಕ.ಸಾ.ಪ. ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ಇಂದು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗುರುಬಸಮ್ಮ ವಿ. ಚಿಗಟೇರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಸುರೇಶ್ ನಾಯ್ಕ ಉದ್ಘಾಟಿಸುವರು. ಎಚ್. ನಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ವಿಷಯವಾಗಿ ಆರ್. ಶಿವಕುಮಾರ್ ಉಪನ್ಯಾಸ ನೀಡಲಿದ್ದಾರೆ. ಜಿಗಳಿ ಎನ್.ಎಲ್. ಪ್ರಕಾಶ್, ಕೆ.ಜಿ. ಸೌಭಾಗ್ಯ, ನವೀನ್ಕುಮಾರ್, ಷಡಕ್ಷರಪ್ಪ ಎಂ. ಬೇತೂರು ಉಪಸ್ಥಿತರಿರುವರು. ಸುಮತಿ ಜಯ್ಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು. ವೀರಣ್ಣ ವಿ. ಚಿಗಟೇರಿ, ಎಂ.ಕೆ. ಬಕ್ಕಪ್ಪ (ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ದತ್ತಿ), ಬಿ.ಕೆ. ತಿಪ್ಪೇಸ್ವಾಮಿ (ರಂಗೇನಹಳ್ಳಿ ಶ್ರೀಮತಿ ಹನುಮಮ್ಮ ಮಾಕುಂಟೆ ದ್ಯಾಮಪ್ಪ ದತ್ತಿ), ಶ್ರೀಮತಿ ಶಿಲ್ಪಶ್ರೀ ಎಸ್.ಹೆಚ್. ಪ್ರಶಾಂತ್ (ತೂಲಹಳ್ಳಿ ಶ್ರೀಮತಿ ಟಿ.ಎಂ. ಶಕುಂತಲ ಸಂಗಮೇಶ್ವರದ ಹೇಮಣ್ಣ ದತ್ತಿ) ದತ್ತಿ ದಾನಿಗಳಾಗಿದ್ದಾರೆ.
ನಗರದಲ್ಲಿ ಇಂದು ಕಸಾಪದಿಂದ ಸಾಹಿತ್ಯೋತ್ಸವ : ಇಂದು ದತ್ತಿ ಉಪನ್ಯಾಸ
![07 kasapa 08.09.2023 ನಗರದಲ್ಲಿ ಇಂದು ಕಸಾಪದಿಂದ ಸಾಹಿತ್ಯೋತ್ಸವ : ಇಂದು ದತ್ತಿ ಉಪನ್ಯಾಸ](https://janathavani.com/wp-content/uploads/2023/09/07-kasapa-08.09.2023.jpg)