ನಗರದಲ್ಲಿ ಇಂದು ವಿನೂತನ ಮಹಿಳಾ ಸಮಾಜದ ವಾರ್ಷಿಕೋತ್ಸವ

ವಿದ್ಯಾನಗರ ವಿನಾಯಕ ಬಡಾವಣೆಯ ವಿನೂತನ ಮಹಿಳಾ ಸಮಾಜದ 18ನೇ ವಾರ್ಷಿಕೋತ್ಸವವು ವಿನಾಯಕ ಬಡಾವಣೆ ವಿನಾಯಕ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿದೆ.
ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಪನ್ಯಾಸಕರಾದ ಶ್ರೀಮತಿ ಉಷಾ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಕ್ಕಳ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ವಿಷಯ ಕುರಿತು ಮಾತನಾಡಲಿದ್ದಾರೆ. ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ವೀಣಾ ನಂಜಪ್ಪ, ಬೆಳವನೂರು ನಾಗರಾಜಪ್ಪ, ಯು. ಸದಾಶಿವಪ್ಪ ಉಪಸ್ಥಿತರಿರುವರು.

error: Content is protected !!