ನಗರದಲ್ಲಿ ಇಂದು ಪ್ರತಿಭಾ ಪುರಸ್ಕಾರ

ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆಯನ್ನು ಪ್ರೊ. ಬಿ. ಸಿದ್ದಲಿಂಗಯ್ಯ ವಹಿಸುವರು. ವೀರಣ್ಣ ಎಸ್‌. ಜತ್ತಿ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ. ಹೆಚ್‌. ಮಲ್ಲಿಕಾರ್ಜುನಪ್ಪ ಆಗಮಿಸುವರು. ಡಾ. ಕೆ.ಟಿ. ನಾಗರಾಜ ನಾಯ್ಕ ಉಪಸ್ಥಿತರಿರುವರು. ಶ್ರೀ ತರಳಬಾಳು ಜಗದ್ಗುರು ಲಿಂ. ಶ್ರೀ ಗುರು ಶಾಂತರಾಜ ದೇಶೀಕೇಂದ್ರ ಮಹಾಸ್ವಾಮಿಗಳವರ ಸ್ಮರಣಾರ್ಥ 2020-22 ರಲ್ಲಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿಯರಾದ ಕು. ನೂರ್‌ ಈ ಸಭಾ ಎಸ್‌.ಕೆ., ಶ್ರೀಮತಿ ಸ್ನೇಹ ಪಿ. ನಾಯ್ಕ.
ಶ್ರೀ ತರಳಬಾಳು ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಸ್ಮರಣಾರ್ಥ ನಗದು ಬಹುಮಾನ 2020-22ರಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ ವಿದ್ಯಾರ್ಥಿ ಗಣೇಶ್‌ ಎಸ್‌.ಕೆ.

error: Content is protected !!