ಮಲೇಬೆನ್ನೂರು, ಡಿ.27- ಕೊಮಾರನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಹೆಚ್.ಹಾಲೇಶ್ ಮತ್ತು ಉಪಾಧ್ಯಕ್ಷರಾಗಿ ಪಾರೇರ ಮನೋಹರ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲೇಶ್ ಮತ್ತು ಶ್ರೀಮತಿ ರಶ್ಮಿ ಅಣ್ಣಪ್ಪ ಅವರು ತಲಾ 6 ಮತಗಳನ್ನು ಪಡೆದಾಗ ಲಾಟರಿ ಮಾಡಲಾಯಿತು.
ಲಾಟರಿಯಲ್ಲಿ ಹಾಲೇಶ್ ಅವರ ಹೆಸರು ಬಂದಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಾರೇರ ಮನೋಹರ 7 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿ ಸ್ಪರ್ಧಿ ಜಿ.ಮಹೇಶ್ವರಪ್ಪ 5 ಮತಗಳನ್ನು ಪಡೆದು ಪರಾಭವಗೊಂಡರು.
ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಂಘದ ನಿರ್ದೇಶಕರಾದ ಜಿ.ರಂಗಪ್ಪ, ಯು.ಮಂಜುನಾಥ್, ಕೆ.ಎಸ್.ನಿಂಗರಾಜ್, ಕೆ.ಎಂ.ಚಂದ್ರಯ್ಯ, ಶ್ರೀಮತಿ ಶಾಂತಮ್ಮ, ಶ್ರೀಮತಿ ಸುಮ ಐರಣಿ ಮಾರುತಿ, ಶ್ರೀಮತಿ ಗಂಗಮ್ಮ ಮಡಿವಾಳ ವೀರಭದ್ರಪ್ಪ ಈ ವೇಳೆ ಹಾಜರಿದ್ದು, ಮತ ಚಲಾಯಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಹಾಲೇಶ್, ಉಪಾಧ್ಯಕ್ಷರಾಗಿ ಮನೋಹರ್
