ರಾಮಮಂದಿರ ಉದ್ಘಾಟನೆಯ ಆಹ್ವಾನದ ಅಕ್ಷತೆಯನ್ನು ಮನೆಮನೆಗೂ ತಲುಪಿಸಬೇಕು

ರಾಮಮಂದಿರ ಉದ್ಘಾಟನೆಯ ಆಹ್ವಾನದ ಅಕ್ಷತೆಯನ್ನು ಮನೆಮನೆಗೂ ತಲುಪಿಸಬೇಕು

ಹರಪನಹಳ್ಳಿ, ಡಿ. 27 – ರಾಮಮಂದಿರ ಉದ್ಘಾಟನೆಯ ಆಹ್ವಾನ ಅಕ್ಷತೆ ಕೊಡುವ ಮೂಲಕ ತಾಲ್ಲೂಕಿನ ಪ್ರತಿ ಮನೆ ಮನೆಗೂ ತಲುಪಿಸಬೇಕು ಎಂದು ಆರ್‍ಎಸ್‍ಎಸ್‍ನ ಗ್ರಾಮ ವಿಕಾಸ ಪ್ರಾಂತ ಸಂಯೋಜಕ ಪ್ರಚಾರಕ ಜಿ.ರಾಜಶೇಖರ್‌ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ನಿನ್ನೆ ಆಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾನ ಸಂಬಂಧ ಅಯೋಧ್ಯೆಯಿಂದ ಬಂದ ಅಕ್ಷತ ಕಳಸ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು.
ಜನವರಿ 22ಕ್ಕೆ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಿರಿಸಂಭ್ರಮ ದೇಶವ್ಯಾಪಿಯಾಗಬೇಕು. ಆ ನಿಟ್ಟಿನಲ್ಲಿ ಆಯೋಧ್ಯೆಯಿಂದ ಬಂದಿರುವ ಸಾವಯವ ಅಕ್ಕಿ, ದೇಶಿಯ ತುಪ್ಪ, ಅರಿಸಿಣ ಹಾಕಿ ತಯಾರಿಸಿದ ಅಕ್ಷತೆ ಕಾಳುಗಳನ್ನು ಪ್ರತಿ ಮನೆ ಮನೆಗೂ ತಲುಪಬೇಕಾಗಿದೆ ಎಂದರು.
500ವರ್ಷಗಳ ಹೋರಾಟದ ಸಾಫಲ್ಯತೆ ಅಂದು ಸಿಗುತ್ತದೆ. ಈ ದೇಶದ ಜನರ ಶ್ರದ್ಧೆಯ ಬಿಂದು ಶ್ರೀರಾಮವಾಗಿದ್ದು, ಈ ಕಾರ್ಯಕ್ರಮ ಕೇವಲ ಶ್ರೀರಾಮನಮೂರ್ತಿ ಪ್ರತಿಷ್ಠಾಪನೆ ಅಲ್ಲ, ದೇಶದ ಸ್ವಾಭಿಮಾನ ನಿರ್ಮಾಣ ಕಾರ್ಯಕ್ರಮ ಎಂದು ಹೇಳಿದರು.
ಅಂದು ಜ.22ರಂದು 12.16 ನಿಮಿಷಕ್ಕೆ ಆಯಾ ಗ್ರಾಮ ಗಳಲ್ಲಿನ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ಕೈಗೊಳ್ಳ ಬೇಕು. ಪ್ರತಿಯೊಬ್ಬರು ರಾಮ ಮಂದಿರ ಉದ್ಘಾ ಟನೆಯ ಕಾರ್ಯಕ್ರಮವನ್ನು ದೃಶ್ಯ ಮಾದ್ಯಮ ಗಳಲ್ಲಿ ವೀಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಹಳೇಬಸ್‌ ನಿಲ್ದಾಣ ದಲ್ಲಿನ ಸಾರಿಬಯಲು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಅಯೋಧ್ಯೆಯಿಂದ ಬಂದಿರುವ ಅಕ್ಷತೆ ಕಾಳುಗಳುಳ್ಳ ಚೀಲಗಳನ್ನು ಮೆರವಣಿಗೆ ಮೂಲಕ ಹೊಸಪೇಟೆ ರಸ್ತೆಯ ಮಾರ್ಗವಾಗಿ ತರಳಬಾಳು ಕಲ್ಯಾಣ ಮಂಟಪ್ಪಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಸಂಯೋಜಕ ಜಿ.ಪಶುಪತಿ, ತಾಲ್ಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಹೆಚ್.ಎಂ.ಜಗದೀಶ್, ಬಿಜೆಪಿ ಮುಖಂಡರಾದ ಜಿ.ನಂಜನಗೌಡ, ಆರುಂಡಿ ನಾಗರಾಜ, ಎಚ್.ಎಂ.ಅಶೋಕ, ಸುವರ್ಣ ಆರುಂಡಿ, ಕುಸುಮಾ ಜಗದೀಶ್‌, ಹರಾಳ ಪ್ರಭ ಅಶೋಕ, ಮುದುಕ್ಕವ್ವನವರ ಶಂಕರ, ಚಂದ್ರಶೇಖರ ಪೂಜಾರ, ಆರ್‍ಎಸ್‍ ಎಸ್‍ಮುಖಂಡ ಸತ್ಯನಾರಾಯಣ, ಬಿ.ವೈ.ವೆಂಕಟೇಶನಾಯ್ಕ, ನಾಗರಾಜ, ಮನೋಜ ತಳವಾರ, ಶಿವಾನಂದ ದಾದಾಪುರ, ಕಡತಿ ರಮೇಶ್, ಸೇರಿದಂತೆ ಇತರರು ಇದ್ದರು.

error: Content is protected !!