ದಾವಣಗೆರೆ, ಡಿ.27- ನಗರದ ಮಾಜಿ ಬಿಎಸ್ಎಫ್ ಯೋಧ ಮಹಮ್ಮದ್ ರಫೀ ಅವರು 2023 ರಲ್ಲಿ 2 ರಾಜ್ಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ 3 ಬೆಳ್ಳಿ ಪದಕ, 3 ಕಂಚಿನ ಪದಕ ಪಡೆದಿದ್ದು, ರಾಷ್ಟ್ರಮಟ್ಟದ ಓಟ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, 4 ಬೆಳ್ಳಿ ಪದಕ, 4 ಕಂಚಿನ ಪದಕ ಪಡೆದಿದ್ದಾರೆ. ದಸರಾ ಕ್ರೀಡಾ ಸ್ಪರ್ಧೆಯಲ್ಲಿ 1 ಚಿನ್ನದ ಪದಕ, 2 ಕಂಚಿನ ಪದಕ ಹಾಗೂ ವಿವಿಧ ಮ್ಯಾರಥಾನ್ ಓಟ ಸ್ಪರ್ಧೆಗಳಲ್ಲಿ 6 ಪದಕಗಳೊಂದಿಗೆ 2023 ರಲ್ಲಿ ಒಟ್ಟು 26 ಪದಕಗಳನ್ನು ಪಡೆದಿದ್ದು, ಬರುವ ಜನವರಿ 21 ರಂದು ನಡೆಯಲಿರುವ ಏಷ್ಯಾದ ನಂ. 1 ಟಿಎಟಿಎ ಮುಂಬಯಿ ಮ್ಯಾರಥಾನ್ನಲ್ಲಿ 42.195 ಕಿ.ಮೀ. ಓಟದ ಸ್ಪರ್ಧೆಗೆ ಭಾಗವಹಿಸಲಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಅನನ್ಯ ಸಾಧನೆ
![11 rafi news '28.12.2023 ಕ್ರೀಡಾ ಕ್ಷೇತ್ರದಲ್ಲಿ ಅನನ್ಯ ಸಾಧನೆ](https://janathavani.com/wp-content/uploads/2023/12/11-rafi-news-28.12.2023.jpg)