ಮಲೇಬೆನ್ನೂರು, ಡಿ.25- ಕೆ.ಎನ್.ಹಳ್ಳಿ ಮತ್ತು ಜಿಗಳಿ ಕ್ಯಾಂಪ್ (ವಿನಾಯಕ ನಗರ ಕ್ಯಾಂಪ್) ನಲ್ಲಿರುವ ಚರ್ಚ್‌ಗಳಲ್ಲಿ ಸೋಮವಾರ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾ ಯಿತು. ಬೆಳಗ್ಗೆ ಚರ್ಚ್‌ಗಳಲ್ಲಿ ಆರಂಭದ ಪ್ರಾರ್ಥನೆ ಮಾಡಿ, ನಂತರ ಗೀತಾರಾಧನೆ ಮಾಡಲಾಯಿತು. ಬಳಿಕ ಚರ್ಚ್ ಫಾದರ್ ಅವರು ಉಪನ್ಯಾಸ ಹಾಗೂ ಕ್ರಿಸ್‌ಮಸ್ ಸಂದೇಶ ನೀಡಿದರು. ಕೇಕ್ ಕತ್ತರಿಸಿ ಹಬ್ಬ ಆಚರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
January 12, 2025