ಉಜ್ಜಯಿನಿಯಲ್ಲಿ ನಾಳೆ ಲಕ್ಷ ದೀಪೋತ್ಸವ, ಪುಣ್ಯಸ್ಮರಣೋತ್ಸವ

ಉಜ್ಜಯಿನಿಯಲ್ಲಿ ನಾಳೆ ಲಕ್ಷ ದೀಪೋತ್ಸವ, ಪುಣ್ಯಸ್ಮರಣೋತ್ಸವ

ಉಜ್ಜಯಿನಿ, ಡಿ.23- ಶ್ರೀ ಲಿಂ. ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 25ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಪೀಠದಲ್ಲಿ ಸಾಮೂಹಿಕ ವಿವಾಹಗಳು ನಡೆಯಲಿದ್ದು ಅಂದು ಸಂಜೆ 6.30 ಕ್ಕೆ ಶ್ರೀ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಕಾರ್ತಿಕ ಲಕ್ಷದೀಪೋತ್ಸವ ಜರುಗಲಿದೆ.

ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನೇತೃತ್ವವನ್ನು ಅಖಿಲ ಭಾರತ ಪ್ರೀತಿಯ ಶಿವಾಚಾರ್ಯಸಮೂಹಗಣ ವಹಿಸಲಿದೆ. ಅಖಿಲ ಭಾರತ ವೀರಶೈವ ಶಿವಾಾರ್ಯ ಸಂಸ್ಥೆ, ಮಠಾಧೀಶರ ಧರ್ಮ ಪರಿಷತ್‌ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಕೂಡ್ಲಿಗಿ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ ವಹಿಸುವರು. ಕಾರ್ಯಕ್ರಮವನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ವೈ. ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ್ವರ, ಜಮೀರ್‌ ಅಹಮ್ಮದ್‌ಖಾನ್‌, ಬಿ. ನಾಗೇಂದ್ರ,  ವೈ. ಸತೀಶ, ಎನ್‌.ವೈ. ಗೋಪಾಲಕೃಷ್ಣ, ಯು.ಬಿ. ಬಣಕಾರ, ಕೆ. ನೇಮಿರಾಜ್‌ನಾಯ್ಕ, ಹೆಚ್‌.ಆರ್. ಗವಿಯಪ್ಪ, ಇ. ತುಕಾರಾಂ, ನಾ.ರಾ. ಭರತ್‌ರೆಡ್ಡಿ, ಬಿ.ಪಿ. ಹರೀಶ್‌, ಎಂ.ಪಿ. ಲತಾ, ಕೃಷ್ಣಾನಾಯ್ಕ್, ಬಿ. ದೇವೇಂದ್ರಪ್ಪ, ಕೆ.ಎಸ್‌. ಈಶ್ವರಪ್ಪ, ಬಿ.ಆರ್‌. ಪಾಟೀಲ್‌, ಯಶವಂತರಾಯಗೌಡ ಪಾಟೀಲ್, ಬಿ.ಕೆ. ಸಂಗಮೇಶ್ವರ, ಜೆ.ಟಿ. ಪಾಟೀಲ, ಪ್ರಕಾಶ ಕೋಳಿವಾಡ, ಎಂ.ಪಿ. ರೇಣುಕಾಚಾರ್ಯ, ಎಲ್‌. ಭೀಮಾನಾಯ್ಕ, ಎಸ್‌.ವಿ. ರಾಮಚಂದ್ರಪ್ಪ, ಹೆಚ್‌.ಎಸ್‌. ಶಿವಶಂಕರ್‌, ಹೆಚ್‌.ಪಿ. ರಾಜೇಶ್‌, ಪಿ.ಟಿ. ಪರಮೇಶ್ವರನಾಯ್ಕ, ಶ್ರೀಮತಿ ನಿಂಗಮ್ಮ ಸಣ್ಣಮಾರಪ್ಪ, ಶ್ರೀಮತಿ ಪುಷ್ಪಾವತಿ ಎ. ರೇವಣ್ಣ ಮತ್ತಿತರರು ಆಗಮಿಸುವರು.

ಕಾರ್ಯಕ್ರಮದಲ್ಲಿ ನಿತೇಶ್‌ ಪಾಟೀಲ್‌, ಸಂಜೀವ್‌ ಪಾಟೀಲ್‌, ಕೆ.ಎಂ. ಸಂತೋಷ್‌, ಪಿ.ಕೆ.ಎಂ. ಪ್ರಶಾಂತ್‌ ಅವರುಗಳಿಗೆ ಗುರುರಕ್ಷೆ ನೀಡಲಾಗುವುದು. 

ನಾಳೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಪೀಠದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಸಂಜೆ 6.30 ಕ್ಕೆ ಶ್ರೀ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಕಾರ್ತಿಕ ಲಕ್ಷದೀಪೋತ್ಸವ ಜರುಗಲಿದೆ.

ಇಂದು ಸಂಜೆ 6 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ಡಿ. 25 ರ ರಾತ್ರಿ 9 ಗಂಟೆಯಿಂದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. 

error: Content is protected !!