ದಾವಣಗೆರೆ, ಡಿ. 24 – ಅದಮ್ಯ ಕಲಾ ಸಂಸ್ಥೆ ಹಾಗೂ ಅದಮ್ಯ ಫೌಂಡೇಷನ್ ಇವರುಗಳ ಆಶ್ರಯ ದಲ್ಲಿ ಶ್ರೀ ದುರ್ಗಾಂಬಿಕಾ ಶಾಲಾ ಆವರಣದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಟಿ.ಹೆಚ್. ಗುಡ್ಡಪ್ಪ ಅವರು ಸಂತ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಗಣೇಶ್ ಬಾಬು ವಹಿಸಿದ್ದರು. ಶ್ರೀ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟಿ ಗೌಡ್ರ ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಪಿ.ಜಿ. ಸತ್ಯನಾರಾಯಣ, ಅದಮ್ಯ ಕಲಾ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ಗೀತಾ ಮಾಲತೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅದಮ್ಯ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕು. ಪೃಥ್ವಿ ಪ್ರಾರ್ಥಿಸಿದರು. ಕು. ಪಲ್ಲವಿ ನಿರೂಪಿಸಿದರು.