ದಾವಣಗೆರೆ, ಡಿ. 24 – ಶ್ರೀ ಕ್ಷೇತ್ರ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಯ ಕಡೇ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 26 ರ ಮಂಗಳವಾರ ಜರುಗಲಿದೆ.
ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವೀರಭದ್ರಸ್ವಾಮಿ, ಆದಿದೈವ ಶನೇಶ್ವರ ಸ್ವಾಮಿ, ಜಗದ್ಗುರು ರೇಣುಕಾಚಾರ್ಯ ಗದ್ದಿಗೆಗಳಿಗೆ ರುದ್ರಾಭಿಷೇಕ, ಮಹಾಪೂಜೆ ನಡೆಯಲಿದೆ.
ನಂತರ ರಾತ್ರಿ ಶ್ರೀ ವೀರಭದ್ರೇಶ್ವರ, ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ದೇವರುಗಳ ಪಾಲಿಕೆ ಉತ್ಸವವು ದೇವಸ್ಥಾನದಿಂದ ನಂದಿ ಬಸಪ್ಪನ ಕಟ್ಟೆಯವರೆಗೂ ಇಕ್ಕೆಲಗಳಲ್ಲಿ ನಡೆಯುವುದು.
ಬುಧವಾರ ಬೆಳಿಗ್ಗೆ ಬೇಡಿಕೊಂಡ ಭಕ್ತರ ಗುಗ್ಗಳ ಸೇವೆಯೊಂದಿಗೆ ಅಲ್ಲಿಂದ ಹೊರಟು ದೇವಸ್ಥಾನಕ್ಕೆ ಆಗಮಿಸಿ ಕಾರ್ಯಕ್ರಮ ಸಂಪನ್ನಗೊಳ್ಳುವುದೆಂದು ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂಘದ ಅಧ್ಯಕ್ಷ ಬಿ.ಎಮ್. ಷಣ್ಮಖಯ್ಯ ತಿಳಿಸಿದ್ದಾರೆ.