ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಪ್ರಶಂಸೆ
ಜಗಳೂರು, ಡಿ.24- ಕ್ರೀಡೆಗಳು ದೈಹಿಕ, ಮಾನಸಿಕ ಸದೃಢತೆಗೆ ಪೂರಕವಾಗಿವೆ.ಐಪಿಎಲ್, ಕೆಪಿಎಲ್, ಮಾದರಿಯಲ್ಲಿ ಜೆಪಿಎಲ್ ಕ್ರಿಕೆಟ್ಟನ್ನು ಪಟ್ಟಣದಲ್ಲಿ ಆಯೋಜಿಸಿರುವ ಪ್ರಾಂಚೈಸಿಗಳ ಹಾಗೂ ಆಯೋಜಕರ ಕಾರ್ಯ ಶ್ಲ್ಯಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರಶಂಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಜಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ (ಜೆಪಿಎಲ್) ಪಂದ್ಯಾವಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು.
ಬರದನಾಡಿನ ಇಂದಿನ ಕ್ರಿಕೆಟ್ ಪಂದ್ಯಾವಳಿ ರಾಜ್ಯ ಮಟ್ಟದ ಪಂದ್ಯಾವಳಿಯಾಗಿ ಭಾಸವಾಗುತ್ತದೆ. ತಾಲ್ಲೂಕಿನ ಕ್ರಿಕೆಟ್ ಪ್ರೇಮಿಗಳು ಪ್ರೇಕ್ಷಕರಾಗಿ ಮನೆಯಲ್ಲಿ ಕುಳಿತು ಯೂಟೂಬ್ ಚಾನೆಲ್‌ನಲ್ಲಿ ಲೈವ್ ಸ್ಪೋರ್ಟ್ಸ್ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ.
ಸಮಾನತೆ ಹಾಗೂ ಜಾತ್ಯತೀತ ಮನೋಭಾವ ಮೂಡುವುದು ಕ್ರೀಡೆಯಿಂದ ಮಾತ್ರ ಸಾಧ್ಯ.ಸೋಲು-ಗೆಲುವು ಸಹಜ ಭಾಗವಹಿಸುವಿಕೆ ಮುಖ್ಯವಾಗಿದೆ. ಸಮಾನವಾಗಿ ಸ್ವೀಕರಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಮಹೇಶ್ವರಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್, ಅನೂಪ್ ರೆಡ್ಡಿ, ಬಂಗ್ಲೆ ಫರ್ವೇಜ್, ಎಂ.ಡಿ.ಕೀರ್ತಿಕುಮಾರ್, ಆಯೋಜಕರಾದ ನಾಗರಾಜ್, ಶಾರೂಕ್, ಪೃಥ್ವಿ, ಕುಮಾರ್, ನವಾಜ್, ರೋಷನ್, ಬರ್ಕತ್ ಅಲಿ, ಮುಸ್ಟೂರಪ್ಪ, ಮುಂತಾದವರು ಇದ್ದರು.