ರೈತರ ಆದಾಯ ದುಪ್ಪಟ್ಟಿಗೆ ಶೀಘ್ರದಲ್ಲೇ ಪ್ರಯತ್ನ : ಶಾಸಕ ಪ್ರಕಾಶ ಕೋಳಿವಾಡ

ರೈತರ ಆದಾಯ ದುಪ್ಪಟ್ಟಿಗೆ ಶೀಘ್ರದಲ್ಲೇ ಪ್ರಯತ್ನ : ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಡಿ.24- ಕೃಷಿ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನದ ತಿಳಿವಳಿಕೆ ಕೊಡಿಸಿ, ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಕೇವಲ ವೇದಿಕೆಯ ಭಾಷಣವಲ್ಲ, ನಾನೊಬ್ಬ ರೈತ ಮನೆತನದವನಾಗಿ ನನ್ನ ಅವಧಿ ಮುಗಿಯುವದರೊಳಗೆ ಮಾಡಿ ತೋರಿಸುತ್ತೇನೆ ಎಂದು ಶಾಸಕ ಪ್ರಕಾಶ ಕೋಳಿವಾಡ ರೈತರ ಮೇಲೆ ಆಣೆ ಮಾಡಿದರು.

ಇಲ್ಲಿನ ಕೃಷಿ ಇಲಾಖೆ ಏರ್ಪಡಿಸಿದ್ದ ಚೌದರಿ ಚರಣಸಿಂಗ್ ಹುಟ್ಟುಹಬ್ಬದ ಸ್ಮರಣೆಯ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ರಿಮಿನಾಶಕ ಉಪಯೋಗಿಸಿ ಬೆಳೆಗೆ ಪೂರಕವಾದ ಕ್ರಿಮಿಕೀಟಗಳನ್ನೂ ಸಹ ನಾವು ನಾಶ ಮಾಡುತ್ತೇವೆ. ಕ್ರಿಮಿನಾಶಕ ಉಪಯೋಗಿಸದೇ ಮೋಹಕ ಬಲೆ ಮೂಲಕ ಬೆಳೆ ರಕ್ಷಣೆ ಮಾಡುವಂತಹ ಹೊಸ ತಂತ್ರಜ್ಞಾನ ಪಡೆದುಕೊಳ್ಳಬೇಕು. ನಮ್ಮ ರೈತರು ತಮ್ಮ ಹಳೆಯ ಪದ್ದತಿಗಳನ್ನು ಬದಲಾವಣೆ ಮಾಡಿಕೊಂಡು  ಕಾಲಕ್ಕೆ ತಕ್ಕಂತೆ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾದ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ರೈತರು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವ ಪರಿಸ್ಥಿತಿಯನ್ನು ತಪ್ಪಿಸುವಂತೆ ತಾ.ಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಶಾಸಕರಿಗೆ ಮನವಿ ಮಾಡಿದರು.

ಸಹಾಯಕ ಕೃಷಿ ನಿರ್ದೇಶಕಿ ಜಿ.ಶಾಂತಮಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕರಿ ಯಲ್ಲಪ್ಪ ಕೊರಚರ, ಎಂ.ಹೆಚ್.ಪಾಟೀಲ್‌, ಮಂಜುಳಾ ಬಣಕಾರ್‌, ನೀಲಕಂಠ ಅಂಗಡಿ, ಹನುಮಂತಪ್ಪ ಕಬ್ಬಾರ ಜಗದೀಶ ಹುಲಗೂರ್‌, ಸುರೇಶ್‌ ಹೊನ್ನಪ್ಪಳವರ ಮತ್ತಿತರರಿದ್ದರು. ಇದೆ ಸಂದರ್ಭದಲ್ಲಿ  ಸಾವಯವ ಕೃಷಿ, ಪ್ರಗತಿಪರ ರೈತರನ್ನು  ಸನ್ಮಾನಿಸಲಾಯಿತು.

error: Content is protected !!