ದಾವಣಗೆರೆ, ಡಿ.19- ನಗರದಲ್ಲಿ ಈಚೆಗೆ ನಡೆದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಕು. ಹಾದಿಯಾ ತಾರಿಖ್ ಮತ್ತು ನಿಖಿತಾ ಎಲ್. ಟಿ. ಭಾಗವಹಿಸಿ, ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು ಎಂಬ ವಿಷಯವನ್ನು ಮಂಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಪಠ್ಯಕ್ರಮ ವಿಭಾದ ವಿದ್ಯಾರ್ಥಿಗಳಾದ ಅಭಿಷೇಕ್ ಸಿ. ಪಿ. ಮತ್ತು ಶಶಾಂಕ್ ಬಿ. ನಗರ ಹಿರಿಯ ವಿಭಾಗದಲ್ಲಿ `ಗೋಮಾತೆ ನಿನಗಿದೋ ನಮನ’ ಎಂಬ ಶೀರ್ಷಿಕೆಯಡಿ ವಿಷಯವನ್ನು ಪ್ರಸ್ತುತಪಡಿಸಿದ್ದು, ನಗರ ಕಿರಿಯ ವಿಭಾಗದಿಂದ ಸುಪ್ರೀತ್ ಆರ್. ವಿ ಮತ್ತು ಅಂಕಿತ್ ಹರ್ಷ ಎಸ್. ಆಹಾರ ನಮ್ಮ ಔಷಧವಾಗಲಿ ಹಾಗೂ ಔಷಧ ನಮ್ಮ ಆಹಾರ ವಾಗದಿರಲಿ ಎಂಬ ವಿಷಯವನ್ನು ಮಂಡಿಸಿ ಅಭಿನಂದನಾ ಪ್ರಮಾಣ ಪತ್ರ ಪಡೆದಿದ್ದಾರೆ.