ದಾವಣಗೆರೆ, ಡಿ. 19 – ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು ನಾಡಿದ್ದು ದಿನಾಂಕ 20 ಮತ್ತು 21 ರಂದು ನಗರಕ್ಕೆ ಆಗಮಿಸಲಿದ್ದಾರೆ. ನಾಡಿದ್ದು ದಿನಾಂಕ 20 ರ ಬುಧವಾರ ಮಧ್ಯಾಹ್ನ 1 ಗಂಟೆಗೆ ನಗರಕ್ಕಾಗಮಿಸುವ ಅವರು, ಎಂ.ಬಿ.ಎ ಮೈದಾನದಲ್ಲಿ ಏರ್ಪಾಡಾಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧೀವೇಶನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 2 ಗಂಟೆಗೆ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ಪರಾಮರ್ಶನಾ ಸಭೆ ನಡೆಸಿ, ವಾಸ್ತವ್ಯ ಹೂಡುವರು.
February 27, 2025