ನಗರದಲ್ಲಿ ಇಂದು ಅಯ್ಯಪ್ಪಸ್ವಾಮಿ ಪಡಿಪೂಜೆ

ನಗರದಲ್ಲಿ ಇಂದು  ಅಯ್ಯಪ್ಪಸ್ವಾಮಿ ಪಡಿಪೂಜೆ

ಎಂ.ಸಿ.ಸಿ `ಬಿ’ ಬ್ಲಾಕ್ ಬಿಐಇಟಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಮಂಡಲ ಪೂಜೆ, ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ಇಂದು ನಡೆಯಲಿದೆ. ಬೆಳಿಗ್ಗೆ 5.30 ಕ್ಕೆ ಪಂಚ ದೇವರಿಗೆ ಪಂಚಾಮೃತ, ಶ್ರೀ ಅಯ್ಯಪ್ಪಸ್ವಾಮಿ ತುಪ್ಪದ ಅಭಿಷೇಕ, ಸಹಸ್ರ ನಾಮಾವಳಿ, ಪುಷ್ಪಾರ್ಚಾನೆ ಅಲಂಕಾರ, ಮಂತ್ರಪುಷ್ಪ, ಅಷ್ಟವರ್ಧನ ಮಹಾಗಣಪತಿ ಹೋಮ, ಮಹಾಮಂಗಳಾರತಿ ನಡೆಯಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಭವ್ಯ ಮೆರವಣಿಗೆ, ದೀಪಾರಾಧನೆ, ಪಡಿಪೂಜೆ ಮಂಗಳಾರತಿ ನಡೆಯಲಿದೆ. 

error: Content is protected !!