ಹರಿಹರ, ಡಿ. 15 – ನಗರದ ಹೊಸ ಭರಂಪುರ ಬಡಾವಣೆಯ ಶ್ರೀ ಗ್ರಾಮ ದೇವತೆ ಊರಮ್ಮ ದೇವಿಗೆ ಕಾರ್ತಿಕ ಮಹೋತ್ಸವ ನಿಮಿತ್ಯ ಊರಮ್ಮ ದೇವಿಗೆ ಬೆಳಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಬಗೆಯ ಪೂಜಾ ಕಾರ್ಯಗಳು ನಡೆದು, ಸಂಜೆ ದೇವಿಯ ಮೂರ್ತಿಯನ್ನು ಮಹಿಳೆಯರ ಆರತಿ ಕಳಸಗಳ ಮೂಲಕ ಡೊಳ್ಳು, ಸಮಾಳ, ಡ್ರಮ್ ಸೆಟ್ ಹಾಗೂ ವಿವಿಧ ಕಲಾ ಮೇಳ ಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆಯ ತದನಂತರ ಮಹಾ ದೀಪೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಗೌಡ್ರು ಪುಟ್ಟಪ್ಪ, ಬಣಕಾರ ಸಿದ್ದಪ್ಪ, ಗ್ರಾಮದೇವತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಪೂಜಾರ್ ಈರಣ್ಣ, ಗೌರವ ಅಧ್ಯಕ್ಷ ಪಾಲಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಬಿ. ರಾಜಶೇಖರ, ಉಪಾಧ್ಯಕ್ಷ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿ ಸುರೇಶ್ ಚಂದಪೂರ್, ಗುತ್ಯಪ್ಪ, ನಿರ್ದೇಶಕ ಎಂ. ಚಿದಾನಂದ ಕಂಚಿಕೇರಿ, ಪರಮೇಶ್ವರಪ್ಪ ದಾವಣಗೆರೆ ಶಿವಾನಂದಪ್ಪ, ಹಾವನೂರು ಈರಣ್ಣ, ಸುರೇಶ್ ಹಣಿಗಿ ,ರಾಘು ಚೌಗಲೆ, ಮಜ್ಜಿಗೆ ಚಂದ್ರಪ್ಪ, ಸಿಂಗಾಡಿ ಸಿದ್ದಪ್ಪ, ಹರಪನಹಳ್ಳಿ ಬಸವರಾಜ್, ಅರ್ಚಕರು ನಾಗರಾಜ್, ಶೇಖಪ್ಪ ಕಣದಾಳ ಕರಿಬಸಪ್ಪ ಕಂಚಿಕೇರಿ, ಬೆಣ್ಣೆ ಸಿದ್ದೇಶ್, ಎಂ. ಸಾಗರ್, ಬಣಕಾರ್ ಮಹಾಂತೇಶ್, ರವಿಕುಮಾರ್ ಮಡಿವಾಳ, ಹಾವನೂರು ಶಂಭು, ಡಿಶ್ ಸ್ವಾಮಿ ಶಂಭುಲಿಂಗಯ್ಯ ರುದ್ರೇಶ್, ಸದಾಶಿವಯ್ಯ, ಮುರುಗೇಶ್, ಹುಲಿಕಟ್ಟಿ ಉಮೇಶ್, ಗಿರೀಶ್, ಕೆ.ಬಿ. ಚಂದ್ರಶೇಖರ್, ಹಾಲೇಶ್ ನಾಗೇನಹಳ್ಳಿ, ಶಿವಾಜಿ, ನಿಕ್ಕಿಲ್ ಪೂಜಾರ್, ಬೆಣ್ಣೆ ಪುಟ್ಟ, ಹಾಲೇಶ್ ಹಣಿಗಿ, ರಾಘವೇಂದ್ರ, ನಾಗರಾಜ್ ಪೂಜಾರ್, ಶಿವಾಜಿ, ರಾಖೇಶ್ ಮಾಗಿ, ಬೆಣ್ಣೆ ಹನುಮಂತಪ್ಪ, ವಿಜಯಕುಮಾರ್, ಬಾಸಿಂಗದರ್ ಅಜಯ್, ವಿಜಯ್ ಇತರರು ಹಾಜರಿದ್ದರು.