ದಾವಣಗೆರೆ, ಡಿ. 14- ಡಾ.ಪ್ರಭಾಕರ ಕೋರಿ ಕೋ- ಆಪ್ ಕ್ರೆಡಿಟ್ ಸೊಸೈಟಿ ದಾವಣಗೆರೆ ಶಾಖೆ ಯಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ 63 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 67 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸೊಸೈಟಿ ಅಭಿವೃದ್ಧಿ ಅಧಿಕಾರಿ ಎಸ್.ಹೆಚ್. ಕಲ್ಲೇಶ್ ತಿಳಿಸಿ ದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಈ ಶಾಖೆಯು ಯಶಸ್ವಿಯಾಗಿ 6ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ಅವರು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸೊಸೈಟಿಯ ಎಸ್.ಎಸ್. ಹುರಿಕಡ್ಲಿ, ಕುಮಾರ್ ಚೌಗಲಿ, ಬಿ.ಆರ್. ಮಂಜುನಾಥ್, ಎಂ.ವೀರಣ್ಣ, ನಾಗರಾಜ್ ಉಪಸ್ಥಿತರಿದ್ದರು.
December 23, 2024