ಎನ್.ಪರಶುರಾಮಪ್ಪಗೆ ‘ಗೌರವ ಡಾಕ್ಟರೇಟ್’ ಪ್ರದಾನ

ಎನ್.ಪರಶುರಾಮಪ್ಪಗೆ  ‘ಗೌರವ ಡಾಕ್ಟರೇಟ್’ ಪ್ರದಾನ

ದಾವಣಗೆರೆ, ಡಿ. 14 – ನಗರದ ಯೋಗ ಗುರು ಎನ್.ಪರಶುರಾಮಪ್ಪ ಅವರಿಗೆ ಯೋಗ-ಸಂಸ್ಕೃತಮ್ ವಿಶ್ವವಿದ್ಯಾಲಯ (ಪ್ಲೋರಿಡಾ, ಯುಎಸ್‌ಎ)ದಿಂದ ‘ಗೌರವ ಡಾಕ್ಟರೇಟ್’ ನೀಡಿದೆ.

ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿರುವ ಎಸ್‌ಕೆಪಿ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಮೊನ್ನೆ ನಡೆದ ಅಮೆರಿಕದ  ಯೋಗ-ಸಂಸ್ಕೃತಮ್ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಪಾಂಡಿಚೆರಿ ಸರ್ಕಾರದ ಉಪಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಕೇಂದ್ರ ಸರ್ಕಾರದ ಡಾ.ಕಶ್ಯಪ್ ಸಮ್ಮುಖದಲ್ಲಿ ವಿವಿಯ ಕುಲಪತಿ ಡಾ.ಬಿ.ವಿ.ಕೆ.ಶಾಸ್ತ್ರಿ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಎಸ್.ಜಿ.ಎಸ್ ಸ್ಥಾಪಕ ಅಧ್ಯಕ್ಷ ಡಾ. ಎಮ್ ನಿರಂಜನ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

error: Content is protected !!