ಸರ್ಕಾರ ಅನೇಕ ಭಾಗ್ಯಗಳನ್ನು ನೀಡಿದರೂ ರೈತನಿಗೆ ಭಾಗ್ಯವಿಲ್ಲದಂತಾಗಿದೆ

ಸರ್ಕಾರ ಅನೇಕ ಭಾಗ್ಯಗಳನ್ನು ನೀಡಿದರೂ ರೈತನಿಗೆ ಭಾಗ್ಯವಿಲ್ಲದಂತಾಗಿದೆ

ರಾಣೇಬೆನ್ನೂರು, ಡಿ. 14 – 21ನೇ ಶತಮಾನದಲ್ಲಿ ದೇವಸ್ಥಾನಗಳು ಹೆಚ್ಚಾಗಿದ್ದು, ದೇವರನ್ನು ಪೂಜಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ನಂದಿಗುಡಿ ಬೃಹ ನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ನುಡಿದರು. 

ಇಲ್ಲಿನ ಗೌರಿಶಂಕರ ನಗರದ ಗೌರಿಶಂಕರ ದೇವ ಸ್ಥಾನದ ಕಳಸಾರೋಹಣ ಹಾಗೂ ಕಾರ್ತಿಕೋತ್ಸವದ ಪ್ರಯುಕ್ತ ಸೋಮವಾರ ಏರ್ಪಡಿಸಲಾಗಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಜೀವನ ನಡೆಸವಲ್ಲಿ ಸಮಾಧಾನ ಹಾಗೂ ಬದುಕಿನ ಮೌಲ್ಯಗಳನ್ನು ಕಟ್ಟಿಕೊಂಡು ಸಾಗಬೇಕು. ತಂದೆ-ತಾಯಿಗಳ ಪಾಲನೆ ಹಾಗೂ ಅವರ ಸರಿಯಾಗಿ ಬಗ್ಗೆ ನೋಡಿಕೊಳ್ಳಬೇಕಿದೆ. ದುಡಿಮೆಯ ಜೊತೆಗೆ ನಮ್ಮ ಸಂಸ್ಕತಿ ಅಳವಡಿಸಿಕೊಂಡು ಗುರು-ಹಿರಿಯರಿಗೆ ಮನ್ನಣೆ ನೀಡಬೇಕಾಗಿದೆ. ಇಂದು ರೈತ ಅನೇಕ ಸಂಕಷ್ಟಗಳಲ್ಲಿ ಸಿಲುಕಿದ್ದಾನೆ. ಇಂದಿನ ಸರ್ಕಾರ ಅನೇಕ ಭಾಗ್ಯಗಳನ್ನು ನೀಡಿದರೂ ರೈತನಿಗೆ ಭಾಗ್ಯವಿಲ್ಲದಂತಾಗಿದೆ. ದೇವಸ್ಥಾನಗಳ ಮೂಲಕ ನಮ್ಮ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದರು.

ಜಿ.ಪಂ.ಮಾಜಿ ಸದಸ್ಯ ಸಂತೋಷ್‌ಕುಮಾರ ಪಾಟೀಲ ಮಾತನಾಡಿ, ಧರ್ಮ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮದ ಜೊತೆಗೆ ನಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗಿದೆ. ಜೀವನದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಕೆ.ಗೌಡರ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ, ನಗರಸಭಾ ಸದಸ್ಯರಾದ ಪ್ರಕಾಶ ಬುರಡಿಕಟ್ಟಿ, ಹನುಮಂತಪ್ಪ ಹೆದ್ದೇರಿ, ವಕೀಲ ಪಿ.ಆರ್.ಕುಪ್ಪೇಲೂರ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಡಾ.ಓ.ಎಫ್. ದ್ಯಾವನಗೌಡರ, ಕಾರ್ಯದರ್ಶಿ ಎ.ಪಿ.ದುರ್ಗದಶೀಮಿ, ಅರ್ಚಕ ಶರಣಬಸಯ್ಯ ಹಿರೇಮಠ, ಸಂಕಪ್ಪ ಮಾರನಾಳ, ಯುವರಾಜ ಬಾರಟಕ್ಕಿ, ಸಮಿತಿ ಸದಸ್ಯರಾದ ಡಿ.ಬಿ.ಬೇಲೂರ, ಎಸ್.ಎಸ್.ಹೂಲಿ, ಕೆ.ಬಿ.ಪುಟ್ಟಪ್ಪನವರ, ಆರ್.ಬಿ.ಹರಳಹಳ್ಳಿ, ಪಿ.ಎಚ್.ಬಣಕಾರ, ಕುಮಾರಸ್ವಾಮಿ ಡಿ, ಎಮ್.ಎಸ್.ಅಳಲಗೇರಿ, ಕಮಲಮ್ಮ ಬೆಳವಿಗೆ, ಆರ್.ಕೆ.ಕುಡಪಲಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!