ಹರಗನಹಳ್ಳಿ ಬಳಿ ಕಾರು ಅಪಘಾತ: ಪಿಎಸ್ಐ ಪ್ರಭು ಪ್ರಾಣಾಪಾಯದಿಂದ ಪಾರು

ಮಲೇಬೆನ್ನೂರು, ಡಿ.13- ಹರಗನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಪ್ರಭು ಕೆಳಗಿನಮನೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಣೇಬೆನ್ನೂರಿನಿಂದ ಮಲೇಬೆನ್ನೂರಿಗೆ ಪ್ರಭು ಅವರೇ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸೇತುವೆ ಮೇಲೆ ಬಿದ್ದಿದೆ ಎನ್ನಲಾಗಿದೆ. ಅಪಘಾತವಾದ ತಕ್ಷಣ ಕಾರಿನಲ್ಲಿ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಪ್ರಭು ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಕಾರು ಪಲ್ಟಿಯಾಗಿ ಪುನಃ ಸಹಜವಾಗಿ ನಿಂತ ನಂತರ ಪ್ರಭು ಅವರು ಕಾರಿನಿಂದ ಇಳಿದು ಬಂದಿದ್ದಾರೆ. ಈ ವೇಳೆ ಇವರ ಕಾರಿನ ಹಿಂದೆ ಯಾವುದೇ ವಾಹನಗಳು ಇಲ್ಲದಿದ್ದರಿಂದ ಇವರು ಬಚಾವ್ ಆಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ತಕ್ಷಣ ಪ್ರಭು ಅವರನ್ನು ದಾವಣಗೆರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ.

error: Content is protected !!