ಬಿಜೆಪಿ ಮುಖಂಡ ಕೆ.ಎನ್. ಓಂಕಾರಪ್ಪ ನಿಧನಕ್ಕೆ ಸಂತಾಪ

ದಾವಣಗೆರೆ,ಡಿ. 13- ಬಿಜೆಪಿ ಮುಖಂಡ ಕೆ.ಎನ್. ಓಂಕಾರಪ್ಪ ಅವರಿಗೆ ಜಿಲ್ಲೆಯ ಬಿಜೆಪಿ ಮೂಲ ಕಾರ್ಯಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.  ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಮೂಲ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ.ಪಿ. ಕೃಷ್ಣಮೂರ್ತಿ ಪವಾರ್, ಹೆಚ್.ಎಸ್. ಲಿಂಗ ರಾಜ್, ಡಿ.ಎಸ್. ಶಿವಶಂಕರ್,  ರಾಮಚಂದ್ರ ವದ್ವಾನಿ, ಕೆ.ಟಿ. ಕಲ್ಲೇಶ, ಷಣ್ಮುಖಯ್ಯ, ಗೋಪಾಲ್ ಸಾವಂತ್, ಮಾಲತೇಶ್ ಗುಪ್ತಾ, ಆರ್. ಪ್ರತಾಪ್, ಸಂತೋಷ್ ಪೈಲ್ವಾನ್, ಮಧು, ಸುರೇಶ್, ಬೆಣ್ಣೆದೋಸೆ ರವಿ, ವೀರಯ್ಯ ಮುಂತಾದವರು ಉಪಸ್ಥಿತರಿದ್ದರು.

error: Content is protected !!